ಸಿಂಧನೂರು: ನಗರವು ವೇಗವಾಗಿ ಬೆಳೆಯುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಅನೇಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಬ್ಬರಿಗೂ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಲಿ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಇದನ್ನೂ ಓದಿ: ವೈದ್ಯಕೀಯ, ರಕ್ತದಾನ ಉಚಿತ ಶಿಬಿರ
ನಗರದ ಶಾಂತಿ ಆಸ್ಪತ್ರೆಯಲ್ಲಿ ಶುಕ್ರವಾರ ನೂತನ ಸಿಟಿ ಸ್ಕಾೃನಿಂಗ್ ಸೆಂಟರ್ ಸೇರಿ ವಿವಿಧ ಆರೋಗ್ಯ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಸಿಂಧನೂರು ವೈದ್ಯಕೀಯ ಸಂಕೀರ್ಣವಾಗಿ ರೂಪುಗೊಳ್ಳುತ್ತಿದೆ. ಕೆಲ ವರ್ಷಗಳ ಹಿಂದೆ ಏನಾದರೂ ತೊಂದರೆಯಾಗಿದ್ದರೆ ರಾಯಚೂರು, ಬಳ್ಳಾರಿ, ಬೆಂಗಳೂರು, ಹುಬ್ಬಳ್ಳಿ-ಧಾರವಾಡಗೆ ಹೋಗಬೇಕಿತ್ತು.
ಈಗ ತಜ್ಞ ವೈದ್ಯರು, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಇಲ್ಲಿಯೇ ದೊರೆಯುತ್ತಿವೆ. ಸ್ಕಾೃನಿಂಗ್ ಸೆಂಟರ್ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಶಾಂತಿ ಆಸ್ಪತ್ರೆ ವ್ಯವಸ್ಥಾಪಕ ನರೇಶ ಬಲಸು ಮಾತನಾಡಿ,
ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಶಾಂತಿ ಆಸ್ಪತ್ರೆ ಒಂದು ಹೆಜ್ಜೆ ಮುಂದಿದೆ. ಈಗ ಸಿಂಧನೂರಿನ ನಾಗರಿಕರಿಗೆ ಹೆಚ್ಚಿನ ವೈದ್ಯಕೀಯ ಸೇವೆ ನೀಡಲು ಸಿ.ಟಿ.ಸ್ಕಾೃನ್, ಡಯಾಲಿಸಿಸ್, ಅಲ್ಟ್ರಾ ಸೌಂಡ್, ಎಂಡೋಸ್ಕೊಪಿ, ಲ್ಯಾಬರೋಟರಿ, ಡಿಜಿಟಲ್‌ಎಕ್ಸರೆ, ಫಾರ್ಮಸಿ, 2ಡಿ ಎಕೊ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು. ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಡಾ.ನಾಗವೇಣಿ, ಪ್ರಮುಖರಾದ ವಿಶ್ವನಾಥ ಚೌದ್ರಿ, ನೆಮಿತರಾವ್, ಕನಕಪ್ಪ ಇತರರಿದ್ದರು.