ಗುಣಮಟ್ಟದ ಆಹಾರದತ್ತ ಚಿತ್ತ ಇರಲಿ

ದಾವಣಗೆರೆ: ಗುಣಮಟ್ಟದ ಆಹಾರ ಸೇವಿಸಿ, ಆರೋಗ್ಯಕರ ಚಿಂತನೆ ನಡೆಸಿ ಎಂದು ದಾವಣಗೆರೆ ವಿವಿ ವಾಣಿಜ್ಯ ವಿಭಾಗದ ಛೇರ‌್ಮನ್ ಪ್ರೊ.ಪಿ.ಲಕ್ಷ್ಮಣ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಆವರಣದಲ್ಲಿ ಭದ್ರಾ ಪದವಿ ಕಾಲೇಜಿನಿಂದ ಆಯೋಜಿಸಿದ್ದ ಫುಡ್ ಫೆಸ್ಟಿವಲ್ ಉದ್ಘಾಟಿಸಿ ಮಾತನಾಡಿದರು.

ಆಧುನಿಕತೆ ಭರಾಟೆಯಲ್ಲಿ ಜನರು ರಸ್ತೆಬದಿ ಆನಾರೋಗ್ಯಕರ ಆಹಾರ ಸೇವನೆಯಿಂದ ಆರೋಗ್ಯ ನಿರ್ಲಕ್ಷಿಸುತ್ತಿದ್ದಾರೆ. ಬಾಹ್ಯ ಸೌಂದರ್ಯ, ಉಡುಗೆ-ತೊಡುಗೆಗೆ ಹೆಚ್ಚು ವ್ಯಯಿಸುತ್ತಿದ್ದಾರೆಯೇ ಹೊರತು, ಶುಚಿ, ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಹೋಟೆಲ್ ಉದ್ಯಮಿ ಮೋತಿ ಪರಮೇಶ್ವರ್ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ.ಟಿ.ಮುರುಗೇಶ್ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್.ಮುರಿಗೇಂದ್ರಪ್ಪ, ಭದ್ರಾ ಪಿಯು ಕಾಲೇಜಿನ ಪ್ರಾಚಾರ್ಯ ಪ್ರೊ.ಯು.ಗುರುಸ್ವಾಮಿ, ಆಡಳಿತ ಮಂಡಳಿ ಅಧ್ಯಕ್ಷ ಕೆ.ಜಿ.ಉಮೇಶ್, ಕಾರ್ಯದರ್ಶಿ ಎಂ.ಸಂಕೇತ್ ಉಪಸ್ಥಿತರಿದ್ದರು.