ಕತಾರ್​ನಲ್ಲಿ ತುಳು ಒಕ್ಕೂಟದ ವಾರ್ಷಿಕೋತ್ಸವ: ಆರ್ಯಭಟ ಪುರಸ್ಕತ ಸುಬ್ರಹ್ಮಣ್ಯ ಅವರಿಗೆ ಸನ್ಮಾನ

ದೋಹಾ (ಕತಾರ್): ಇಲ್ಲಿನ ವಕ್ರಾಹ್​ನಲ್ಲಿರುವ ದೆಹಲಿ ಸಾರ್ವಜನಿಕ ಶಾಲೆಯಲ್ಲಿ ಕತಾರ್​ನ ತುಳು ಒಕ್ಕೂಟ ಆಯೋಜಿಸಿದ್ದ 19ನೇ ವಾರ್ಷಿಕೋತ್ಸವದಲ್ಲಿ ಆರ್ಯಭಟ ಪ್ರಶಸ್ತಿ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಅದ್ಧೂರಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ಪುರುಷೋತ್ತಮ ಬಿಳಿಮಲೆ, ಕತಾರ್​ ತುಳು ಕೂಟದ ಅಧ್ಯಕ್ಷ ಅಸ್ಮತ್​ ಅಲಿ, ಕತಾರ್​ ಕರ್ನಾಟಕ ಸಂಘದ ಉಪಾಧ್ಯಕ್ಷ ರವಿ ಶೆಟ್ಟಿ ಹಾಗೂ ಗೌರವಾನ್ವಿತ ಅಧ್ಯಕ್ಷರಾಗಿ ಸತೀಶ್​ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಅವರು ಪ್ರಸ್ತುತ ’ಭಾರತೀಯ ಸಮುದಾಯ ಹಿತನಿಧಿ’ ಸಂಘಟನೆಯ ಜಂಟಿ ಕಾರ್ಯದರ್ಶಿಯಾಗಿ ಕತಾರಿನಲ್ಲಿ ನೆಲೆಸಿರುವ ಭಾರತೀಯರ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ.