More

    ಸದ್ಯದಲ್ಲೇ ‘ಚೌಕಾಬಾರ’ ಆಡಿ ಮುಗಿಸಲಿದ್ದಾರೆ ವಿಕ್ರಮ್​ ಸೂರಿ

    ಕೆಲವು ವರ್ಷಗಳ ಹಿಂದೆ ‘ಎಳೆಯರು ನಾವು ಗೆಳೆಯರು’ ಎಂಬ ಚಿತ್ರದ ಮೂಲಕ ನಿರ್ದೇಶಕರಾದ ನಟ ವಿಕ್ರಮ್​ ಸೂರಿ, ಇದೀಗ ಸದ್ದಿಲ್ಲದೆಯೇ ಇನ್ನೊಂದು ಚಿತ್ರ ಶುರು ಮಾಡಿದ್ದಾರೆ. ಅದೇ ‘ಚೌಕಾಬಾರ’. ಬಹುಶಃ ಲಾಕ್​ಡೌನ್​ ಇಲ್ಲದಿದ್ದರೆ, ಈ ಚಿತ್ರ ಮುಗಿದು ಬಿಡುಗಡೆಯಾಗುತ್ತಿತ್ತೋ ಏನೋ? ಆದರೆ, ಲಾಕ್​ಡೌನ್​ನಿಂದ ನಿಂತಿದ್ದ ಚಿತ್ರದ ಕೆಲಸಗಳು, ಇದೀಗ ಪುನಃ ಪ್ರಾರಂಭವಾಗಿವೆ.

    ಮೊದಲಿಗೆ ಈ ಚಿತ್ರದ ಹಾಡುಗಳ ರೆಕಾರ್ಡಿಂಗ್​ ಕೆಲಸ ಮುಗಿದಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಹೆಸರಾಂತ ಕವಿಗಳಾದ ಡಾ.ಎಚ್​.ಎಸ್​. ವೆಂಕಟೇಶಮೂರ್ತಿ, ಡಾ.ಬಿ.ಆರ್. ಲಕ್ಷ್ಮಣ್ ರಾವ್ ಬರೆದಿದ್ದು, ಇನ್ನೊಂದು ಹಾಡನ್ನು ವಿಕ್ರಮ್​ ಸೂರಿ ಹಾಗೂ ಹರೀಶ್ ಭಟ್ ಜತೆಯಾಗಿ ರಚಿಸಿದ್ದಾರೆ. ಚೈತ್ರ, ವ್ಯಾಸರಾಜ್ ಸೋಸಲೆ, ಸಿಧಾರ್ಥ್​ಬೆಳ್ಮನು, ನಕುಲ್ ಅಭಯಂಕರ್ ಹಾಗು ರಮ್ಯಾ ಭಟ್ ಹಾಡುಗಳನ್ನು ಹಾಡಿದ್ದಾರೆ. ಸಂಗೀತ ನಿರ್ದೇಶನ ಅಶ್ವಿನ್ ಕುಮಾರ್ ಮಾಡಿದ್ದಾರೆ.

    ಇದನ್ನೂ ಓದಿ: ಮುಂದೆ ಕಷ್ಟ ಆದರೂ ಪರವಾಗಿಲ್ಲ, ನಾನ್​ ರೆಡಿ … ಜಾಹ್ನವಿ ತೀರ್ಮಾನ

    ಅಂದಹಾಗೆ, ಈ ಚಿತ್ರವು ಮಣಿ ಆರ್ ರಾವ್ ಅವರ ‘ಭಾವನ’ ಎಂಬ ಕಾದಂಬರಿ ಆಧಾರಿಸಿದ್ದು, ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಸ್ವತಃ ವಿಕ್ರಮ್​ ಸೂರಿ ಮಾಡುತ್ತಿದ್ದಾರೆ. ವಿಕ್ರಮ್​ ತಮ್ಮ ಪತ್ನಿ ನಮಿತಾ ರಾವ್​ ಜತೆಗೆ ಸೇರಿಕೊಂಡು ನವ ನಿರ್ಮಿತಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಈ ಸಂಸ್ಥೆಯ ಮೊದಲ ಚಿತ್ರವಾಗಿ ‘ಚೌಕಾಬಾರ’ ಕೈಗೆತ್ತಿಕೊಂಡಿದ್ದಾರೆ.

    ಜನರೇಶನ್​ ಗ್ಯಾಪ್​ನ ಕಥೆ ಇದಾಗಿದ್ದು, ಸಂಬಂಧಗಳಲ್ಲಿ ಗೊಂದಲ ಹೆಚ್ಚಾದರೆ ಏನೆಲ್ಲಾ ಆಗುತ್ತದೆ ಎಂದು ಚಿತ್ರ ಸಾರುತ್ತದೆ. ಗೊಂದಲವನ್ನು ಬೆಳೆಸದಿದ್ದರೆ ಎಂತಹ ಸಮಸ್ಯೆಯನ್ನು ಬೇಕಾದರೂ ಬಗೆಹರಿಸಬಹುದು ಎಂಬ ಸಂದೇಶವಿರುವ ಈ ಚಿತ್ರವು ಪ್ರತಿಯೊಬ್ಬರ ಜೀವನಕ್ಕೂ ಬಹಳ ಹತ್ತಿರವಾಗಿದೆ ಎನ್ನುತ್ತಾರೆ ವಿಕ್ರಮ್​ ಸೂರಿ.

    ಇದನ್ನೂ ಓದಿ: ಸುಶಾಂತ್​ ಹಣ ದುರ್ಬಳಕೆ ಪ್ರಕರಣ; ವಿಚಾರಣೆಗೆ ಹಾಜರಾದ ರಿಯಾ ಚಕ್ರವರ್ತಿಗೆ ಇಡಿ ಡ್ರಿಲ್​!

    ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆಯಂತೆ. ಸೆಪ್ಟೆಂಬರ್​ನಲ್ಲಿ ಕಾರವಾರ, ದಾಂಡೇಲಿ ಮುಂತಾದ ಕಡೆ ಚಿತ್ರೀಕರಣ ಮುಗಿಸುವ ಯೋಚನೆ ವಿಕ್ರಮ್​ ಮತ್ತು ಚಿತ್ರತಂಡಕ್ಕಿದೆ.

    ಈ ಹಿಂದೆ ‘ಚಿತ್ರಮಂದಿರದಲ್ಲಿ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಮಿತಾ ರಾವ್​, ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಜತೆಗೆ ಕಾವ್ಯ ರಮೇಶ್​, ಪ್ರಭಂಜನ್​, ಸುಜಯ್​ ಹೆಗಡೆ, ಸಂಜಯ್​ ಸೂರಿ, ಕಿರಣ್​ ವಟಿ, ಸೀತಾ ಕೋಟೆ, ಶಶಿಧರ್​ ಕೋಟೆ, ಮಧು ಹೆಗಡೆ, ಪ್ರಥಮ ಪ್ರಸಾದ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    ಪಂಜಾಬ್​ ಲಿಕ್ಕರ್​ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸೋನು ಸೂದ್ ಅಭಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts