ವಿಶ್ವಕಪ್ ವಿಜೇತರಿಗೆ ಕತಾರ್ ಆಹ್ವಾನ

ಮುಂಬೈ: 1983 ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಸದಸ್ಯರನ್ನು 2022ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್​ಗೆ ಆಹ್ವಾನ ನೀಡಲಾಗಿದೆ. ಕತಾರ್ ಆತಿಥ್ಯದಲ್ಲಿ ನಡೆಯಲಿರುವ ಈ ಕೂಟದ ಸಂಘಟನಾ ಸಮಿತಿಯ ಅಧಿಕಾರಿಯೊಬ್ಬರು ಈ ನಿರ್ಧಾರವನ್ನು ಖಚಿತಪಡಿಸಿದ್ದಾರೆ. ಏಷ್ಯಾದ ಆತಿಥ್ಯದಲ್ಲಿ 2ನೇ ಬಾರಿಗೆ ಫಿಫಾ ವಿಶ್ವಕಪ್ ನಡೆಯಲಿದೆ. ಭಾರತದಲ್ಲಿ ಕ್ರಿಕೆಟ್ ಅತಿದೊಡ್ಡ ಕ್ರೀಡೆ. ಎರಡು ವಿಶ್ವಕಪ್ ಗೆದ್ದ ತಂಡವನ್ನು 2022ರ ಫುಟ್​ಬಾಲ್ ವಿಶ್ವಕಪ್​ನ ವೇಳೆ ಆಹ್ವಾನ ನೀಡಿದ್ದೇವೆ ಎಂದು ಸಿಇಒ ನಾಸ್ಸೆರ್ ಅಲ್ ಖಾತೆರ್ ತಿಳಿಸಿದ್ದಾರೆ. ಅದರೊಂದಿಗೆ ದೇಶದ ಕೆಲ ಫುಟ್​ಬಾಲ್ ಆಟಗಾರರಿಗೂ ಆಹ್ವಾನವಿರಲಿದೆ ಎಂದಿದ್ದಾರೆ.