ಕೆ.ಎಂ.ದೊಡ್ಡಿ: ತಾಲೂಕಿನಲ್ಲಿ ಕೃಷಿ ಜಮೀನುಗಳತ್ತ ಈಗ ಹೆಬ್ಬಾವುಗಳು ಆಗಮಿಸಲು ಆರಂಭಿಸಿದ್ದು, ರೈತರಲ್ಲಿ ಆತಂಕ ಹೆಚ್ಚಿಸಿದೆ.
ಹೌದು ಸಮೀಪದ ಕುರಿಕೆಂಪನದೊಡ್ಡಿ ಗ್ರಾಮದ ತೈಲಪ ಅಲಿಯಾಸ್ ಶಿವಲಿಂಗೇಗೌಡರ ಕಬ್ಬಿನ ಗದ್ದೆಯಲ್ಲಿ ಶುಕ್ರವಾರ ಕಬ್ಬು ಕಟಾವು ಮಾಡುವಾಗ ಸುಮಾರು 10 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ.
ಕಬ್ಬು ಕಟಾವು ಮಾಡುತ್ತಿದ್ದ ಕಾರ್ಮಿಕರು ತಕ್ಷಣ ಜಮೀನಿನ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಮಾಹಿತಿ ತಿಳಿದ ಸ್ನೇಕ್ ಶಿವಕುಮಾರ್ ಆಗಮಿಸಿ ಹಾವನ್ನು ಹಿಡಿದು, ಅರಣ್ಯ ಇಲಾಖೆಯ ವಶಕ್ಕೆ ನೀಡಿದ್ದಾರೆ.