ಸಿಂಧು 50 ಕೋಟಿ ರೂ. ಡೀಲ್!

ನವದೆಹಲಿ: ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್​ಷಿಪ್ ರಜತ ಪದಕ ವಿಜೇತೆ ಪಿವಿ ಸಿಂಧು ಚೀನಾದ ಕ್ರೀಡಾ ಉತ್ಪನ್ನ ಬ್ರಾಂಡ್ ‘ಲೀ-ನಿಂಗ್’ ಜತೆಗೆ ಮುಂದಿನ 4 ವರ್ಷಗಳಿಗೆ ಬರೋಬ್ಬರಿ 50 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಭಾರತದ ಪುರುಷರ ಬ್ಯಾಡ್ಮಿಂಟನ್ ತಾರೆ ಕಿಡಂಬಿ ಶ್ರೀಕಾಂತ್ ಕಳೆದ ತಿಂಗಳು ಈ ಕಂಪನಿ ಜತೆ 35 ಕೋಟಿ ರೂ.ಗಳ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿದ್ದರೆ, 23 ವರ್ಷದ ಸಿಂಧು ಹೊಸ ದಾಖಲೆ ನಿರ್ವಿುಸಿದ್ದಾರೆ. ಇದು ಬ್ಯಾಡ್ಮಿಂಟನ್ ಜಗತ್ತಿನ ಅತಿದೊಡ್ಡ ಒಪ್ಪಂದವಾಗಿದೆ.

ಕೊಹ್ಲಿ ಡೀಲ್​ಗೆ ಸನಿಹ!: ವಿರಾಟ್ ಕೊಹ್ಲಿ ‘ಪುಮಾ’ ಜತೆ ಮಾಡಿಕೊಂಡಿರುವ ಬೃಹತ್ ಒಪ್ಪಂದಕ್ಕೆ ಸಿಂಧು ಡೀಲ್ ಸನಿಹದ ಮೊತ್ತವನ್ನು ಹೊಂದಿದೆ. ಕೊಹ್ಲಿ 2017ರಲ್ಲಿ ಪುಮಾ ಜತೆ 8 ವರ್ಷಗಳಿಗೆ -ಠಿ;100 ಕೋಟಿ ಒಪ್ಪಂದ ಮಾಡಿಕೊಂಡಿದ್ದರು. ಸಿಂಧು ಲೀ-ನಿಂಗ್ ಜತೆಗಿನ ಒಪ್ಪಂದದಲ್ಲಿ -ಠಿ;40 ಕೋಟಿ ಪ್ರಾಯೋಜಕತ್ವಕ್ಕಾಗಿ ಪಡೆಯಲಿದ್ದರೆ, -ಠಿ;10 ಕೋಟಿ ಅವರ ಕ್ರೀಡಾಪರಿಕರಗಳ ವೆಚ್ಚವಾಗಿರುತ್ತದೆ. ಪಿಟಿಐ