ಒಲಿಂಪಿಕ್ಸ್ ನಲ್ಲಿ ಸಿಂಧು ಐತಿಹಾಸಿಕ ಸಾಧನೆ, ಕಂಚಿನ ಪದಕ ಗೆದ್ದ ಮುತ್ತಿನನಗರಿ ಹುಡುಗಿ 

ಟೋಕಿಯೊ: ವಿಶ್ವ ಚಾಂಪಿಯನ್ ಪಿವಿ ಸಿಂಧು ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಜಯಿಸಿದರು. ಇದರಿಂದ ಮುತ್ತಿನನಗರಿಯ ಹುಡುಗಿ ಒಲಿಂಪಿಕ್ಸ್‌ನಲ್ಲಿ ಸತತ 2ನೇ ಬಾರಿಗೆ ಪದಕಕ್ಕೆ ಮುತ್ತಿಕ್ಕಿದರು. ಕೋಟ್ಯಂತರ ಕ್ರೀಡಾಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸದ ಸಿಂಧು ನಿರೀಕ್ಷೆಯಂತೆಯೇ ಭಾರತಕ್ಕೆ ಪದಕ ತಂದುಕೊಡುವಲ್ಲಿ ಯಶಸ್ವಿಯಾದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಹೈದರಾಬಾದ್‌ನ ಸಿಂಧು, ಇದೀಗ ಕಂಚಿನ ಪದಕದೊಂದಿಗೆ ತವರಿಗೆ ವಾಪಸಾಗಲಿದ್ದಾರೆ. ಪ್ರತಿಷ್ಠಿತ ಕೂಟದಲ್ಲಿ ಸತತ ಎರಡು ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಹಾಗೂ … Continue reading ಒಲಿಂಪಿಕ್ಸ್ ನಲ್ಲಿ ಸಿಂಧು ಐತಿಹಾಸಿಕ ಸಾಧನೆ, ಕಂಚಿನ ಪದಕ ಗೆದ್ದ ಮುತ್ತಿನನಗರಿ ಹುಡುಗಿ