ದೇವಳದ ಒತ್ತುವರಿ ಜಾಗ ಸ್ವಾಧೀನ 

blank

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒತ್ತುವರಿಯಾಗಿರುವ ಜಾಗವನ್ನು ಸ್ವಾಧೀನ ಮಾಡುವ ಕಾರ್ಯ ಮುಂದುವರಿದೆ.

blank

ನೆಲ್ಲಿಕಟ್ಟೆಯಲ್ಲಿ ವಾಸ್ತವ್ಯವಿಲ್ಲದ ಆದಂ ಹಾಜಿ ಪತ್ನಿ ರುಕ್ಕಾಬಿ ಹೆಸರಿನ ಸ್ಥಳ ಬಾಡಿಗೆಯ ೮ ಸೆಂಟ್ಸ್ ಭೂಮಿಯನ್ನು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ನೇತೃತ್ವದಲ್ಲಿ ದೇವಸ್ಥಾನದ ಸುಪರ್ದಿಗೆ ಪಡೆದುಕೊಳ್ಳಲಾಯಿತು. ಜೆಸಿಬಿ ಮೂಲಕ ಜಾಗದಲ್ಲಿ ತುಂಬಿದ ಗಿಡಗಂಟಿಗಳನ್ನು ತೆರವು ಮಾಡಲಾಯಿತು.

ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಕಾರ್ಯನಿರ್ವಹಣಾಽಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಗೋಪಾಲ ಪೂಜಾರಿ, ಪ್ರಕಾಶ್ ಗೌಡ ತೆರವು ಕಾರ್ಯದ ಉಸ್ತುವಾರಿ ವಹಿಸಿದ್ದರು.

 

ಮಹಾಲಿಂಗೇಶ್ವರ ದೇವಸ್ಥಾನದ ಸ್ಥಳ ಬಾಡಿಗೆಯಲ್ಲಿದ್ದ ಜಾಗವನ್ನು ಮರಳಿ ದೇವಸ್ಥಾನಕ್ಕೆ ಪಡೆದುಕೊಳ್ಳುವ ಕೆಲಸ ಕಾರ್ಯವನ್ನು ಮತ್ತೆ ಆರಂಭಿಸಿದ್ದೇವೆ. ಜಾತ್ರೆ ಸಂದರ್ಭ ಸಮಯಾವಕಾಶವಿರಲಿಲ್ಲ. ದೇವಸ್ಥಾನದ ಜಾಗವನ್ನು ಸರ್ವೇ ಮಾಡಿಸುವ ಕಾರ್ಯ ನಡೆಯುತ್ತಿದೆ. ಮಹಾಲಿಂಗೇಶ್ವರ ದೇವರ ಜಾಗವನ್ನು ಮಹಾಲಿಂಗೇಶ್ವರ ದೇವರಿಗೆ ಬಿಟ್ಟುಕೊಡುತ್ತಿದ್ದಾರೆ. ದೇವಸ್ಥಾನ ವತಿಯಿಂದ ಜಾಗವನ್ನು ಸ್ವಚ್ಛಗೊಳಿಸಿ ಅಲ್ಲಿ ಬೇಲಿಯ ವ್ಯವಸ್ಥೆ ಮಾಡಿ ಫಲಕ ಹಾಕುತ್ತೇವೆ. ಶಾಸಕರ ಸೂಚನೆಯಂತೆ ನೆಲ್ಲಿಕಟ್ಟೆಯಲ್ಲಿ ಇನ್ನೂ ಹಲವು ಜಾಗವನ್ನು ಸ್ವಾಽನ ಪಡೆಯುವ ಕೆಲಸ ಮಾಡುತ್ತೇವೆ.
| ಈಶ್ವರ ಭಟ್ ಪಂಜಿಗುಡ್ಡೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

 

Share This Article
blank

ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರ ನಡುವೆ ಹೃದಯಾಘಾತಗಳು ಹೆಚ್ಚಾಗಿ ಸಂಭವಿಸುತ್ತವೆ! ಯಾಕೆ ಗೊತ್ತಾ? heart attacks

heart attacks: ಪ್ರಪಂಚದಾದ್ಯಂತ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12…

ಕಾಲುಗಳಲ್ಲಿ ರಕ್ತನಾಳಗಳು ಗೋಚರಿಸಲು ಕಾರಣ ಏನು ಗೊತ್ತೆ?: ಅಪಾಯದ ಬಗ್ಗೆ ಅರಿವಿರಲಿ | Visible Veins

Visible Veins: ನಿಮ್ಮ ಕಾಲುಗಳಲ್ಲಿ ಅಥವಾ ನಮ್ಮ ಅಕ್ಕಪಕ್ಕದವರ ಮನೆಯಲ್ಲಿನ ಕೆಲವರಿಗೆ ಈ ರಕ್ತನಾಳಗಳು ಗೋಚರಿಸಿರುವುದು…

blank