ಸಿನಿಮಾ

ಪಣಿಯಾಡಿ ದೇವಸ್ಥಾನಕ್ಕೆ ಪುತ್ತಿಗೆ ಮಠ ಯತಿದ್ವಯರ ಆಗಮನ

ಉಡುಪಿ: ಸಂನ್ಯಾಸ ಸ್ವೀಕರಿಸಿದ ಮೇಲೆ ಹಿರಿಯಡ್ಕ ಪುತ್ತಿಗೆ ಮಠದಲ್ಲಿ ಅಧ್ಯಯನ ನಿರತರಾಗಿದ್ದ ಪುತ್ತಿಗೆ ಮಠದ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಪ್ರಥಮ ಬಾರಿಗೆ ಬುಧವಾರ ಗುರುಗಳಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಜತೆಗೂಡಿ ಪಣಿಯಾಡಿ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು.

ಯತಿದ್ವಯರನ್ನು ಎಂಜಿಎಂ ಕಾಲೇಜಿನ ಮುಂಭಾಗದಿಂದ ಹೂವಿನಿಂದ ಅಲಂಕರಿಸಲಾದ ವಾಹನದಲ್ಲಿ ದೇವಸ್ಥಾನಕ್ಕೆ ನಾಸಿಕ್ ಬ್ಯಾಂಡ್, ವಾದ್ಯ, ವೇದಘೋಷ, ಭಜನೆ, ಬಿರುದಾವಳಿಯೊಂದಿಗೆ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ನಂತರ ಶ್ರೀಗಳು ದೇವರಿಗೆ ವಿಶೇಷ ಕಾಣಿಕೆಯನ್ನಿಟ್ಟು ಮಂಗಳರಾತಿ ಬೆಳಗಿದರು. ಸಭಾಕಾರ್ಯಕ್ರಮದಲ್ಲಿ ಶ್ರೀಪಾದರಿಬ್ಬರಿಗೆ ಪಾದಪೂಜೆಯನ್ನು ನೆರವೇರಿಸಲಾಯಿತು. ಶ್ರೀಗಳು ಫಲಮಂತ್ರಾಕ್ಷತೆಯನ್ನು ನೀಡಿದರು.

ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎಸ್. ನಾರಾಯಣ ಮಡಿ, ಕಾರ್ಯಾಧ್ಯಕ್ಷ ಎಂ.ವಿಶ್ವನಾಥ ಭಟ್, ಪ್ರಧಾನಕಾರ್ಯದರ್ಶಿ ಬಿ.ವಿಜಯರಾಘವ ರಾವ್, ಕಾರ್ಯದರ್ಶಿ ನಾರಾಯಣ ಹೆಗ್ಡೆ, ತಲ್ಲೂರು ಚಂದ್ರಶೇಖರ ಹೆಗ್ಡೆ, ವಿಠಲ ಮೂರ್ತಿ ಆಚಾರ್ಯ, ಶ್ರೀವಾಸ ಆಚಾರ್ಯ ಪಣಿಯಾಡಿ, ಸದಾಶಿವ ಪೂಜಾರಿ, ಭಾರತೀ ಕೃಷ್ಣಮೂರ್ತಿ, ಸುಮಿತ್ರ ಕೆರೆಮಠ, ಶ್ರೀಧರಭಟ್ ಪಣಿಯಾಡಿ, ರಾಜೇಶ್ ಭಟ್ ಪಣಿಯಾಡಿ, ಕೃಷ್ಣಮೂರ್ತಿ ಭಟ್, ಕೆ.ಆರ್.ಆಚಾರ್ಯ, ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ, ಮುರಳೀಧರ ಆಚಾರ್ಯ, ನಗರಸಭೆಯ ಸದಸ್ಯರಾದ ಗಿರೀಶ್ ಕಾಂಚನ್, ವಿದ್ವಾನ್ ಡಾ.ಗೋಪಾಲ ಆಚಾರ್ಯ, ರತೀಶ್ ತಂತ್ರಿ, ರಾಘವೇಂದ್ರ ಭಟ್ , ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯ, ಗುರುರಾಜ್ ಆಚಾರ್ಯ, ಸುಬ್ರಮಣ್ಯ ವೈಲಾಯ, ನಾಗರಾಜ್ ಪಣಿಯಾಡಿ, ಮುರಳೀಧರ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.

Latest Posts

ಲೈಫ್‌ಸ್ಟೈಲ್