ಬೆಂಗಳೂರಲ್ಲಿ ಮಧ್ಯರಾತ್ರಿ ತಾಯಿ-ಮಗನ ಬರ್ಬರ ಹತ್ಯೆ, ಬೆಚ್ಚಿಬಿದ್ದ ಸ್ಥಳೀಯರು

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬುಧವಾರ ಮಧ್ಯರಾತ್ರಿ ತಾಯಿ-ಮಗನ ಕೊಲೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮಮತಾ ಬಸು(75) ಮತ್ತು ಇವರ ಪುತ್ರ ದೇವಬ್ರತಾ(41) ಕೊಲೆಯಾದವರು. ಒರಿಸ್ಸಾ ಮೂಲದ ಇವರು ಜೆಪಿ ನಗರದ ಸಂತೃಪ್ತಿ ನಗರದ ಪುಟ್ಟೇನಹಳ್ಳಿಯಲ್ಲಿ ವಾಸವಿದ್ದರು. ಬುಧವಾರ ಮಧ್ಯರಾತ್ರಿ 1.30ರ ಸುಮಾರಿಗೆ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಯೊಬ್ಬ ತಾಯಿ-ಮಗನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಮನೆಯಲ್ಲಿದ್ದ ಲ್ಯಾಪ್‌ಟಾಪ್, ಮೊಬೈಲ್, ಚಿನ್ನಾಭರಣ, ಎಟಿಎಂ ಕಾರ್ಡ್‌ಗಳನ್ನು ಹೊತ್ತೊಯ್ದಿದ್ದಾನೆ. ದೇವಬ್ರತಾಗೆ ಬೆಂಗಳೂರಿನ ಕಾಲೇಜೊಂದರಲ್ಲಿ ಲೆಕ್ಟರರ್ ಕೆಲಸ ಸಿಕ್ಕಿತ್ತು. ಹಾಗಾಗಿ 20 ದಿನಗಳ ಹಿಂದೆ ಬೆಂಗಳೂರಿಗೆ … Continue reading ಬೆಂಗಳೂರಲ್ಲಿ ಮಧ್ಯರಾತ್ರಿ ತಾಯಿ-ಮಗನ ಬರ್ಬರ ಹತ್ಯೆ, ಬೆಚ್ಚಿಬಿದ್ದ ಸ್ಥಳೀಯರು