ಹೈದರಬಾದ್: ದಕ್ಷಿಣ ಭಾರತದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ(Pushpa-2) ಪುಷ್ಪ-2 ಕೆಲ ದಿನಗಳಲ್ಲೇ (ಡಿ.5) ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಸಜ್ಜಾಗುತ್ತಿದೆ. ಆದರೆ, ತೆಲಂಗಾಣ ಸರ್ಕಾರ ವಿಧಿಸಿದ ಕರ್ಫ್ಯೂ ಹಿನ್ನೆಲೆ ಪುಷ್ಪ-2 ಚಿತ್ರತಂಡಕ್ಕೆ ಭಾರೀ ಹಿನ್ನೆಡೆ ಉಂಟಾಗಿದೆ.
ಹೌದು, ಕಳೆದ 2 ವರ್ಷಗಳಿಂದ ಸದ್ದು ಮಾಡುತ್ತಿರುವ ಪುಷ್ಪ-2 ಚಿತ್ರದ ಬಿಡುಗಡೆಗೆ ಕಾಯುತ್ತಿರುವ ಸಿನಿ ಪ್ರೇಕ್ಷಕರಿಗೆ ಮತ್ತೊಂದು ಬಾರಿ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆಯಾಗಲಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಕಾರಣವೇನೆಂದರೆ, ತೆಲಂಗಾಣ ಸರ್ಕಾರ ಇದೇ ಅ.28ರಿಂದ ನ.28ರ ವರೆಗೆ ಹೈದರಬಾದ್ ಮತ್ತು ಸಿಕಿಂದರಬಾದ್ಗಳ ನಗರದ್ಯಾಂತ ಸಾರ್ವಜನಿಕ ಹಿತದೃಷ್ಠಿ ಕಾಪಾಡುವ ನಿಟ್ಟಿನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳು ಗುಂಪು ಸೇರುವುದು ಮತ್ತು ಸಭೆ ಸಮಾರಂಭಗಳು ಮಾಡದಂತೆ ನಿರ್ಬಂಧ ಹೇರಿ ಕರ್ಫ್ಯೂ ಜಾರಿ ಮಾಡಿದೆ. ಇದರಿಂದ ಪುಷ್ಪ ಸಿನಿಮಾ ಚಿತ್ರತಂಡಕ್ಕೆ ಪ್ರಮೋಷನ್ಗೆ ತಡೆ ಉಂಟಾಗಿದೆ.
ಪ್ರೀ ಇವೆಂಟ್ ಕಾರ್ಯಕ್ರವನ್ನು ಹೈದರಬಾದ್ನಲ್ಲಿ ಬಾರಿ ಸೆಟ್ನೊಂದಿಗೆ ಆಯೋಜಿಸಿ ದೊಡ್ಡ ಮಟ್ಟದಲ್ಲಿ ಸಿನಿ ಪ್ರಮೋಷನ್ಗೆ ತಯಾರಿ ನಡೆದಿತ್ತು ಎನ್ನಲಾಗಿದೆ. ಆದರೆ, ಕರ್ಫ್ಯೂ ಜಾರಿ ಹಿನ್ನಲೆ ಈ ಎಲ್ಲ ತಯಾರಿಗೆ ಏಕಾಏಕಿ ತೆರೆ ಬಿದ್ದಿದೆ.
ಆಂಧ್ರಪ್ರದೇಶಕ್ಕೆ ಶಿಫ್ಟ್?
ಕರ್ಫ್ಯೂನಿಂದಾಗಿ ಅಲ್ಲು ಅರ್ಜುನ್ ಫ್ಯಾನ್ಸ್ ಮತ್ತು ಚಿತ್ರ ರಸಿಕರಿಗೆ ಭಾರಿ ನಿರಾಸೆ ಉಂಟಾಗಿದೆ. ಇದನ್ನು ಅರಿತಿರುವ ಚಿತ್ರತಂಡ ಹೈದರಬಾದ್ ಪ್ರೀ ಇವೆಂಟ್ ಅನ್ನು ಆಂಧ್ರಪ್ರದೇಶ ಇತರೆ ನಗರಗಳಲ್ಲಿ ಮಾಡಲು ಮುಂದಾಗಿದೆ ಎನ್ನಲಾಗಿದೆ. ಆದರೆ, ಇನ್ನು ಕಾರ್ಯಕ್ರವನ್ನು ಎಲ್ಲಿ ಆಯೋಜಿಸಬೇಕು ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿಲ್ಲ. ಹೈದರಬಾದ್ನಲ್ಲೆ ಪ್ರೀ ಇವೆಂಟ್ ಮಾಡಬೇಕು ಎನ್ನುದಾದರೆ ಕರ್ಪ್ಯೂ ತೆರವು ಬಳಿಕ ಅಂದರೆ, ನ.28 ರವರೆಗೆ ಕಾಯಲೇಬೇಕು. ಒಂದು ವೇಳೆ ಪ್ರಮೋಷನ್ ಮುಂದುವರೆದರೆ ಪುಷ್ಪ-2 ಸಿನಿಮಾದ ರಿಲೀಸ್ ಡೇಟ್ ಕೂಡ ಮುಂದೂಡಿಕೆ ಆಗಲಿದೆ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಮೂಡಿದೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಪುಷ್ಪ ದಿ ರೈಸ್ 2021 ರಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಈ ಚಿತ್ರದ ಮೊದಲ ಭಾಗವು ಕೆಂಪು ಚಂದನದ ಕಳ್ಳಸಾಗಣೆ ಹಿನ್ನೆಲೆಯಲ್ಲಿ ಅಧಿಕಾರದ ಹೋರಾಟದ ಮೇಲೆ ಕೇಂದ್ರೀಕೃತವಾಗಿದ್ದು, ನಿರ್ದೇಶಕ ಸುಕುಮಾರ್ ಸಿಕ್ವೇಲ್ನಲ್ಲಿ ಕೂಡ ಈ ಕಥೆ ಮುಂದುವರಿಸಲಿದ್ದಾರೆ ಎನ್ನಲಾಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ಧನಂಜಯ, ರಾವ್ ರಮೇಶ್, ಸುನಿಲ್ ಮತ್ತು ಅನಸೂಯಾ ಭಾರದ್ವಾಜ್ ಸೇರಿದಂತೆ ಬಹು ತಾರಾ ಬಳಗದ ಇದ್ದು, ಇವರೇ ಪುಷ್ಪ-2 ನಲ್ಲಿ ಕೂಡ ಮರುಕಳಿಸುವ ಸಾಧ್ಯತೆ ಇದೆ.(ಏಜೆನೀಸ್)