More

    ಯುವಪೀಳಿಗೆಗೆ ಪೂರ್ಣಚಂದ್ರ ತೇಜಸ್ವಿ ಪ್ರೇರಕರು

    ಹುಬ್ಬಳ್ಳಿ: ದಿ. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನ ನಿಮಿತ್ತ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತೇಜಸ್ವಿ ಅವರ ಕುರಿತು ಭಾಷಣ ಹಾಗೂ ಪ್ರಬಂಧ ಸ್ಪರ್ಧೆ, ಬಹುಮಾನ ವಿತರಣೆ, ‘ಕೃಷ್ಣ ಗೌಡರ ಆನೆ’ ಹಾಗೂ ‘ಬೋಳೇಶಂಕರ’ ನಾಟಕ ಪ್ರದರ್ಶನವನ್ನು ನಗರದ ಕೆಎಲ್‌ಇ ಸಂಸ್ಥೆಯ ಜೆ.ಜಿ. ಪದವಿಪೂರ್ವ ವಾಣಿಜ್ಯ ಕಾಲೇಜ್‌ನಲ್ಲಿ ಸೋಮವಾರ ಏರ್ಪಡಿಸಲಾಗಿತ್ತು.
    ರಂಗರಾಧನ ಕಲಾತಂಡದ ಮುಖ್ಯಸ್ಥ ಲಕ್ಷ್ಮಣ ಪೀರಗಾರ ಉದ್ಘಾಟಿಸಿ ಮಾತನಾಡಿ, ಪೂರ್ಣಚಂದ್ರ ತೇಜಸ್ವಿ ಅವರು ಯುವಪೀಳೆಗೆಗೆ ಪ್ರೇರಕರು. ಅವರ ಪುಸ್ತಕ ಓದುವ ವರ್ಗವನ್ನು ಹೆಚ್ಚಾಗಿ ಸೃಷ್ಟಿಸಬೇಕಿದೆ ಎಂದರು.
    ಉಪನ್ಯಾಸಕಿ ಮಲ್ಲಮ್ಮ ಯಾಟಗಲ್ ಮಾತನಾಡಿ, ಕುವೆಂಪು ಅವರ ಕಲಾ ದೃಷ್ಟಿ, ಕಾರಂತರ ಜೀವನ ದೃಷ್ಟಿ, ಲೋಹಿಯಾ ಅವರ ತತ್ವದೃಷ್ಟಿ ತೇಜಸ್ವಿಯವರ ಪುಸ್ತಕಗಳಲ್ಲಿದೆ. ಒಂದು ಬರೆಯುವ ಸಮಯ ಇನ್ನೊಂದು ಬಾಳುವ ಸಮಯವೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಓತಿಕಾಟದ ಬಗ್ಗೆ ಸಂಶೋಧನೆ ನಡೆಸಿರುವ ಏಕೈಕ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಎಂದರು.
    ಪದವಿ ಪ್ರಾಚಾರ್ಯ ಪ್ರೊ.ಎಸ್.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು. ಇದರಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದರು.
    ಪ್ರಬಂಧ ಸ್ಪರ್ಧೆಯಲ್ಲಿ ಲಕ್ಷ್ಮೀ ಅಜ್ಜಲ್ (ಪ್ರಥಮ), ಸಾನಿಕಾ ತಮ್ಮಣ್ಣವರ (ದ್ವಿತೀಯ), ಭಾಷಣ ಸ್ಪರ್ಧೆಯಲ್ಲಿ ಸೃಷ್ಟಿ ಶೆಟ್ಟಿ (ಪ್ರಥಮ), ಭವಾನಿ ಪೂಜಾರ (ದ್ವಿತೀಯ) ಅವರಿಗೆ ಬಹುಮಾನ ನೀಡಲಾಯಿತು.
    ಪದವಿ ಪೂರ್ವ ಪ್ರಾಚಾರ್ಯ ದತ್ತುಕೃಷ್ಣ ವಾಘಮೋಡೆ, ಕ್ರೀಡಾ ವಿಭಾಗದ ಉಪಾಧ್ಯಕ್ಷ ಸೋಮಶೇಖರ ಎಚ್., ಕಾಲೇಜ್‌ ವಿಭಾಗದ ಉಪಾಧ್ಯಕ್ಷೆ ಪವಿತ್ರಾ ಬುಶೆಟ್ಟಿ ಉಪಸ್ಥಿತರಿದ್ದರು. ರಕ್ಷಿತಾ ಬಸಪೂರ ಹಾಗೂ ಪ್ರಿಯಾ ಕೋಪ್ತಿ ನಿರೂಪಿಸಿದರು. ಉಪನ್ಯಾಸಕಿ ಅಂಜುಮಾ ಸ್ವಾಗತಿಸಿದರು. ರಕ್ಷಿತಾ ಗಾಳೆರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts