ಅಳವಂಡಿ: ಹಡಪದ ಅಪ್ಪಣ್ಣ ಆವರು ನಿರ್ಮಲ ಭಕ್ತಿ, ಕಾಯಕತತ್ವ, ದಾಸೋಹದ ಅರಿವು ಮೂಡಿಸಿದ ಶರಣರಾಗಿದ್ದರು ಎಂದು ಸಿದ್ದೇಶ್ವರ ಮಠದ ಶ್ರೀಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ನೇಣಿಗೆ ಶರಣು
ಗ್ರಾಮದ ಶ್ರೀಮಾರುತೇಶ್ವರ ದೇವಸ್ಥಾನದಲ್ಲಿ ಶ್ರೀಹಡಪದ ಅಪ್ಪಣ್ಣ ಸೇವಾ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಭಾನುವಾರ ಮಾತನಾಡಿದರು.
ಡಂಬಾಚಾರದ ಭಕ್ತಿಯನ್ನು ತಿರಸ್ಕರಿಸಿ ಪರಿಶುದ್ಧ ಭಕ್ತಿಯನ್ನು ಜಗತ್ತಿಗೆ ಸಾರಿದ ಶರಣ ಅಪ್ಪಣ್ಣವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರ್ವರೂ ಸಮಾನರು ಎಂದು ಸಾರಿದ ಹಾಗೂ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್ ಶರಣರಾಗಿದ್ದರು.
ಯುವಕರು ನಂಬಿಕೆ, ಆತ್ಮಶುದ್ಧಿ, ಕಾಯಕ ತತ್ವಗಳನ್ನು ಪಾಲಿಸಿ ಜೀವನ ನಡೆಸಬೇಕು. ಶರಣರ ಜಯಂತಿಗಳನ್ನು ಆಚರಿಸುವ ಜೊತೆಗೆ ಅವರ ತತ್ವಗಳನ್ನು ಪ್ರತಿ ನಿತ್ಯ ನೆನೆದು ಜೀವನ ನಡೆಸಬೇಕು ಎಂದರು.
ಪ್ರಮುಖರಾದ ಗುಡದಪ್ಪ, ಹನುಮಂತಪ್ಪ, ಗಣೇಶ, ಶಿವಣ್ಣ, ನಾಗರಾಜ, ವಸಂತ, ಸತೀಶ, ರೇಣುಕಪ್ಪ, ನಜರುದ್ದೀನ ಇತರರಿದ್ದರು.