More

  ಪೌರಕಾರ್ಮಿಕರು ಕಸದ ಮೇಷ್ಟ್ರಾಗಿ, ಕಸದ ಪೊಲೀಸ್ ಆಗಿ ಸೇವೆ!

  ಪಾವಗಡ: ಸಾರ್ವಜನಿಕರು ಹಸಿ, ಒಣ ಕಸ ಎಂದು ಕಡ್ಡಾಯವಾಗಿ ವಿಂಗಡಿಸಿ ಕಸ ವಿಲೇವಾರಿ ವಾಹನಕ್ಕೆ ನೀಡಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಜಿ. ನವೀನ್‌ಚಂದ್ರ ಮನವಿ ಮಾಡಿದರು.

  ಪುರಸಭೆ ಮುಂಭಾಗ ರೋಟರಿ ಸಂಸ್ಥೆ, ಚಿನ್ಮಯ ಸಂಸ್ಥೆ, ಹೆಲ್ಪ್ ಸೊಸೈಟಿ, ನಮ್ಮ ಹಕ್ಕು ಸಂಟನೆ ಸಹಯೋಗದಲ್ಲಿ ಪ್ಲಾಸ್ಟಿಕ್ ದುಷ್ಪರಿಣಾಮ ಹಾಗೂ ಸ್ವಚ್ಛತೆಯ ಜಾಗೃತಿ ಮೂಡಿಸಲು ಮಂಗಳವಾರ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುವಾನ ನೀಡಿ ಮಾತನಾಡಿದರು.

  ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಸಿದಲ್ಲಿ, ವಾರಾಟ ವಾಡಿದಲ್ಲಿ ದಂಡ ವಿಧಿಸಲಾಗುತ್ತದೆ. ಇನ್ಮುಂದೆ ಪೌರಕಾರ್ಮಿಕರು ಕಸದ ಮೇಷ್ಟ್ರಾಗಿ, ಕಸದ ಪೊಲೀಸ್ ಆಗಿ ಸೇವೆ ಸಲ್ಲಿಸಲಿದ್ದಾರೆ ಎಂದರು.

  ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಸಂಕ್ರಾಂತಿ ಹಬ್ಬದಂದು ರಂಗೋಲಿ ಸ್ಪರ್ಧೆ ನಡೆಸಲಾಯಿತು ಎಂದು ಹೆಲ್ಪ್ ಸೊಸೈಟಿ ಅಧ್ಯಕ್ಷ ವಾನಂ ಶಶಿಕಿರಣ್ ತಿಳಿಸಿದರು.

  ಪುರಸಭೆ ಸದಸ್ಯ ಗೊರ್ತಿ ನಾಗರಾಜ್, ಚಿನ್ಮಯ ಸಂಸ್ಥೆ ಅಧ್ಯಕ್ಷ ಸತ್ಯಲೋಕೇಶ್, ರೋಟರಿ ಕಾರ್ಯದರ್ಶಿ ಅಂತರಗಂಗೆ ಶಂಕರಪ್ಪ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಷಂಷುದ್ದಾಹ ವಾತನಾಡಿದರು. ಭಾರತಿ ಮತ್ತು ಎನ್.ಮಂಜುಳಾ ಪ್ರಥಮ, ಭಾಗ್ಯಶ್ರೀ ಮತ್ತು ಸುಜಾತಾ ದ್ವಿತೀಯ ಹಾಗೂ ಪದ್ಮಾವತಿ ತೃತೀಯ, ಸೌಭಾಗ್ಯಮ್ಮ ಮತ್ತು ಗಂಗಮ್ಮಸವಾಧಾನಕರ ಬಹುವಾನ ಪಡೆದರು.
  ಪುರಸಭೆ ಸದಸ್ಯರಾದ ರಾವಾಂಜಿನಪ್ಪ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಎ.ಕಿರಣ್, ರೋಟರಿ ಅಧ್ಯಕ್ಷ ನಂದೀಶ್‌ಬಾಬು ಯಜವಾನ್, ಬ್ರೈಟ್ ್ಯೂಚರ್ ಕಂಪ್ಯೂಟರ್ ಕೆಂದ್ರದ ಸಿಇಒ ಶ್ರೀಧರ್‌ಗುಪ್ತ, ವಾಜಿ ಸದಸ್ಯ ಮೇಧಾವಿ ನಾಗರಾಜ್, ಪುರಸಭೆ ಇಂಜನಿಯರ್ ಧನುಂಜಯ, ಪರಿಸರ ಅಭಿಯಂತರ ಮಹೇಶ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts