ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪುಣ್ಯ

blank

ಹುಣಸೂರು: ರಾಮರಕ್ಷಾ ಸ್ತೋತ್ರವನ್ನು ದಾಖಲೆಯ ಕಡಿಮೆ ಅವಧಿಯಲ್ಲಿ ಪಠಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಶಾಲೆಯ ವಿದ್ಯಾರ್ಥಿನಿ ವಿ.ಪುಣ್ಯ ಹೆಸರು ದಾಖಲಾಗುವ ಮೂಲಕ ತಾಲೂಕಿಗೆ ಹೆಮ್ಮೆ ತಂದಿದ್ದಾರೆ ಎಂದು ಶಾಸ್ತ್ರಿ ಪಬ್ಲಿಕ್ ಸ್ಕೂಲ್‌ನ ಕಾರ್ಯದರ್ಶಿ ರಾಧಾಕೃಷ್ಣ ಸಂತಸ ವ್ಯಕ್ತಪಡಿಸಿದರು.

2024ರ ಡಿಸೆಂಬರ್ ತಿಂಗಳಿನಲ್ಲಿ ಆನ್‌ಲೈನ್ ಮೂಲಕ ಆಯೋಜನೆಗೊಂಡಿದ್ದ ಸ್ಪರ್ಧೆಯಲ್ಲಿ ತಮ್ಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಎಚ್.ಎನ್.ವೆಂಕಟೇಶ್-ಎಸ್.ಪಿ.ಸಂಧ್ಯಾ ದಂಪತಿ ಪುತ್ರಿ ವಿ.ಪುಣ್ಯ 3 ನಿಮಿಷ 6.59 ಸೆಕೆಂಡ್‌ಗಳ ದಾಖಲೆ ಅವಧಿಯಲ್ಲಿ ಶ್ರೀ ರಾಮರಕ್ಷಾ ಸ್ತೋತ್ರವನ್ನು ಪಠಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ತನ್ನ ಹೆಸರನ್ನು ದಾಖಲಿಸಿದ್ದಾಳೆ. 2018ರಲ್ಲಿ ಮಹಾರಾಷ್ಟ್ರದ ವಿದ್ಯಾರ್ಥಿನಿ 3 ನಿಮಿಷ 20 ಸೆಕೆಂಡ್‌ಗಳಲ್ಲಿ ಸ್ತೋತ್ರ ಪಠಿಸಿದ ದಾಖಲೆಯಿದೆ. ಇದೀಗ ವಿದ್ಯಾರ್ಥಿನಿ ಪುಣ್ಯಳ ಸಾಧನೆ ಇಡೀ ಹುಣಸೂರಿಗೆ ಹೆಮ್ಮೆಯನ್ನು ತಂದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿದರು.

ಪರಂಪರೆ ಹಸ್ತಾಂತರ ಆಗಬೇಕಿದೆ: ಶಾಸ್ತ್ರಿ ಪಬ್ಲಿಕ್ ಶಾಲೆ ಆರಂಭಗೊಂಡು 30 ವರ್ಷಗಳೇ ಸಂದಿವೆ. ಶಾಲೆಯಲ್ಲಿ ಕಲೆ, ಸಂಸ್ಕೃತಿ, ಸಂಪ್ರದಾಯಗಳು, ಆಧ್ಯಾತ್ಮ, ಆಟೋಟಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ರೂಪಿಸಲು ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿನಿ ಪುಣ್ಯ ಈ ಹಿಂದಿನಿಂದಲೂ ಭಗವದ್ಗೀತ ಪಠಣ ಸೇರಿದಂತೆ ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚಿನ ಒಲವು ತೋರಿಸುತ್ತಿದ್ದರು. ಇದೀಗ ಗೀತಾ ಪಠಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 30 ಶಾಲೆಗಳಿಗೆ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ ಎಂದರು.

ಶಾಸ್ತ್ರಿ ಪಿಯು ಕಾಂಪೊಸಿಟ್ ಕಾಲೇಜಿನ ಪ್ರಾಂಶುಪಾಲ ರವಿಶಂಕರ್ ಮಾತನಾಡಿ, ಕಾಲೇಜಿನಲ್ಲಿ ಪ್ರಸ್ತುತ ಸಾಲಿನಲ್ಲಿ 13 ವಿದ್ಯಾರ್ಥಿಗಳು ವಿವಿಧ ಅಥ್ಲೆಟಿಕ ಕ್ರೀಡೆಗಳಲ್ಲಿ ರಾಷ್ಟ್ರ,ಮಟ್ಟವನ್ನು ಪ್ರತಿನಿಧಿಸುವ ಮೂಲಕ ತಾಲೂಕಿಗೆ ಹೆಮ್ಮೆ ತಂದಿದ್ದಾರೆ. ಇದೀಗ ವಿದ್ಯಾರ್ಥಿನಿ ಪುಣ್ಯರ ಸಾಧನೆಯಿಂದಾಗಿ ಶಾಲೆಗೆ ಮತ್ತೊಂದು ಗರಿ ಮೂಡಿದೆ ಎಂದರು.
ಪುಣ್ಯರ ತಾಯಿ ಎಸ್.ಪಿ.ಸಂಧ್ಯಾ ಮಾತನಾಢಿ, ಬಾಲ್ಯದಿಂದಲೂ ತಮ್ಮ ಮನೆಯಲ್ಲಿ ಸಂಸ್ಕೃತ ಶ್ಲೋಕಗಳ ಪಠಣ ಭಗವದ್ಗೀತೆ ಪಠಣ ಕೈಗೊಳ್ಳುವುವುದು ನನ್ನ ಹವ್ಯಾಸವಾಗಿತ್ತು. ಅದನ್ನು ತನ್ನೆರಡು ಮಕ್ಕಳು ನೋಡಿ ಕಲಿತಿದ್ದಾರೆ. ಸಂಸ್ಕೃತ ಭಾಷೆ ಎಲ್ಲ ಬಾಷೆಗಳ ತಾಯಿ ಭಾಷೆಯಾಗಿದ್ದು, ಪುತ್ರಿಯ ಸಾಧನೆ ಹೆಮ್ಮೆ ತಂದಿದೆ. ಶಾಲೆಯಲ್ಲಿನ ಸಹಕಾರ ಅವಿಸ್ಮರಣೀಯ ಎಂದರು.

ವಿದ್ಯಾರ್ಥಿನಿ ಪುಣ್ಯ ಮಾತನಾಡಿ, ಶಾಲೆಯ ಶಿಕ್ಷಕರ ಸಹಕಾರ, ಮನೆಯಲ್ಲಿ ಪಾಲಕರ ಪ್ರೋತ್ಸಾಹದಿಂದಾಗಿ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದಳು. ಇದೇ ವೇಳೆ ಶ್ರೀರಾಮ ಸ್ತೋತ್ರವನ್ನು ನಿರರ್ಗಳವಾಗಿ ಪಠಿಸಿ ಗಮನ ಸೆಳೆದಳು.

 

 

Share This Article

ನರ ದೌರ್ಬಲ್ಯಕ್ಕೆ ನೆಲ್ಲಿಕಾಯಿಯೇ ರಾಮಬಾಣ! ಇದರ ಅನೇಕ ಪ್ರಯೋಜನಗಳ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುತ್ತೆ | Gooseberry

Gooseberry : ಪ್ರಕೃತಿಯಲ್ಲಿ ಹಲವು ರೀತಿಯ ಔಷಧಿಗಳಿವೆ. ಅವು ನಮ್ಮ ಕಣ್ಣಿಗೆ ಗೋಚರಿಸುತ್ತಿದ್ದರೂ ಅವುಗಳಲ್ಲಿರುವ ವಿಶೇಷ…

ಕೊರಿಯನ್ನರು, ಚೀನಿಯರು, ಜಪಾನಿಯರು ರಾತ್ರಿ ಹೊತ್ತು ಸ್ನಾನ ಮಾಡೋದೇಕೆ?ಅಚ್ಚರಿಯ ಮಾಹಿತಿ ಇಲ್ಲಿದೆ..! Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…

ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನಿ! ಅನಾರೋಗ್ಯ ದೂರ ಮಾಡಿ…Mango

ಬೆಂಗಳೂರು: ( Mango ) ಬೇಸಿಗೆಯಲ್ಲಿ  ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.…