Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಡಿಎಸ್​ಪಿ ಹುದ್ದೆಯಿಂದ ಹರ್ವನ್​ಪ್ರೀತ್ ಕೌರ್ ವಜಾ

Wednesday, 11.07.2018, 3:03 AM       No Comments

ಚಂಡೀಗಢ: ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ನಿರ್ವಹಣೆ ತೋರಿದ್ದ ಭಾರತ ಮಹಿಳಾ ಟಿ20 ತಂಡದ ನಾಯಕಿ ಹರ್ವನ್​ಪ್ರೀತ್ ಕೌರ್ ಡಿಎಸ್​ಪಿ ಹುದ್ದೆಗಾಗಿ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿ ಸಿಕ್ಕಿಬಿದ್ದಿದ್ದಾರೆ. ಈ ಮೋಸದ ಬಗ್ಗೆ ತನಿಖೆ ನಡೆಸಿ ತಕ್ಷಣ ಕ್ರಮ ಕೈಗೊಂಡಿರುವ ಪಂಜಾಬ್ ಸರ್ಕಾರ, ಪೊಲೀಸ್ ಇಲಾಖೆಯಲ್ಲಿ ನೀಡಿದ್ದ ಡಿಎಸ್​ಪಿ ಹುದ್ದೆಯಿಂದ ಹರ್ವನ್​ಪ್ರೀತ್ ಕೌರ್​ರನ್ನು ವಜಾ ಮಾಡಿದೆ.

2017ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ಎದುರು 175 ರನ್ ಸಿಡಿಸುವ ಮೂಲಕ ಮಹಿಳಾ ತಂಡದ ‘ಕಪಿಲ್ ದೇವ್’ ಎನ್ನುವ ಪ್ರಶಂಸೆ ಪಡೆದಿದ್ದ ಹರ್ವನ್​ಪ್ರೀತ್​ಗೆ ಪಂಜಾಬ್ ಸರ್ಕಾರ ಡಿಎಸ್​ಪಿ ಹುದ್ದೆ ನೀಡಿತ್ತು. ಮಾರ್ಚ್ 1ರಂದು ಡಿಎಸ್​ಪಿ ಹುದ್ದೆಗೆ ಸೇರಿಕೊಂಡಿದ್ದ ಹರ್ವನ್​ಪ್ರೀತ್, 2011ರಲ್ಲಿ ಮೀರಠ್​ನ ಚೌಧರಿ ಚರಣ್ ಸಿಂಗ್ ವಿವಿಯಿಂದ ಪದವಿ ಪಡೆದಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಪೊಲೀಸ್ ಅಧಿಕಾರಿಗಳ ಪರಿಶೀಲನೆಯ ಬಳಿಕ, ಈ ಪ್ರಮಾಣ ಪತ್ರ ನಕಲಿ ಎಂದು ಸಾಬೀತಾಗಿದೆ. ಇದರಿಂದಾಗಿ ಹರ್ವನ್​ಪ್ರೀತ್​ರ ವಿದ್ಯಾರ್ಹತೆಯನ್ನು ಪಿಯುಸಿ ಎಂದು ಪರಿಗಣಿಸಬಹುದಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಗರಿಷ್ಠ ಕಾನ್​ಸ್ಟೇಬಲ್ ಹುದ್ದೆ ಪಡೆಯಬಹು ದಷ್ಟೆ ಎಂದು ಇಲಾಖೆ ತಿಳಿಸಿದೆ. ‘ಹರ್ವನ್​ಪ್ರೀತ್ ಬಿಎ ಅಂತಿಮ ವರ್ಷದ ಅಂಕಪಟ್ಟಿಯನ್ನು ಸಲ್ಲಿಸಿದ್ದರು. ಆದರೆ ಆ ಅಂಕಪಟ್ಟಿಯ ಕ್ರಮ ಸಂಖ್ಯೆ ಮತ್ತು ದಾಖಲಾತಿ ಸಂಖ್ಯೆ ನಮ್ಮ ದಾಖಲೆಯಲ್ಲಿ ಸಿಕ್ಕಿಲ್ಲ’ ಎಂದು ಮೀರತ್​ನ ಚೌಧರಿ ಚರಣ್ ಸಿಂಗ್ ವಿವಿ ರಿಜಿಸ್ಟ್ರಾರ್ ಜಿಪಿ ಶ್ರೀವಾಸ್ತವ್ ತಿಳಿಸಿದ್ದಾರೆ. ಈ ಮುನ್ನ, ಕಾಮನ್ವೆಲ್ತ್ ಗೇಮ್್ಸ ಸ್ವರ್ಣ ವಿಜೇತ ಅಥ್ಲೀಟ್ ಮಂದೀಪ್ ಕೌರ್ ಕೂಡ ನಕಲಿ ಪದವಿ ಪ್ರಮಾಣ ಪತ್ರ ನೀಡಿ ಸಿಕ್ಕಿಬಿದ್ದಿದ್ದರಲ್ಲದೆ, ಮಾರ್ಚ್​ನಲ್ಲಿ ಅವರನ್ನು ಡಿಎಸ್​ಪಿ ಹುದ್ದೆಯಿಂದ ಪಂಜಾಬ್ ಸರ್ಕಾರ ವಜಾ ಮಾಡಿತ್ತು.

ಅರ್ಜುನ ಪ್ರಶಸ್ತಿಗೂ ಕರಿನೆರಳು?

29 ವರ್ಷದ ಹರ್ವನ್​ಪ್ರೀತ್ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಕಳೆದುಕೊಳ್ಳುವ ಭೀತಿ ಎದುರಿಸಿದ್ದಾರೆ. ಇಲಾಖೆ ಒಂದು ವೇಳೆ ಇವರ ವಿರುದ್ಧ ಎಫ್​ಐಆರ್ ದಾಖಲಿಸಿದರೆ ಪ್ರಶಸ್ತಿ ಹಿಂಪಡೆಯುವುದು ಖಚಿತ ಎನ್ನಲಾಗಿದೆ. ಆದರೆ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿರುವಂತೆ ಹರ್ವನ್​ಪ್ರೀತ್ ಈಗ ಪ್ರಖ್ಯಾತ ಕ್ರಿಕೆಟರ್ ಆಗಿರುವ ಕಾರಣ ಅವರ ವಿರುದ್ಧ ಎಫ್​ಐಆರ್ ದಾಖಲಿಸುವುದಿಲ್ಲ. ಆದರೆ ಮಾದರಿ ಕ್ರೀಡಾಪಟುವಾಗಬೇಕಿದ್ದ ಇಂಥವರಿಂದ ಗೌರವಾನ್ವಿತ ಹುದ್ದೆಗಾಗಿ ಮೋಸ ನಡೆದಿರುವುದಕ್ಕೆ ಟ್ವಿಟರ್​ನಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮುನ್ನ ಹರ್ವನ್​ಪ್ರೀತ್ ಕೌರ್ ರೈಲ್ವೇ ಇಲಾಖೆಯ ಕಚೇರಿ ಮೇಲ್ವಿಚಾರಕಿಯಾಗಿದ್ದರು.

Leave a Reply

Your email address will not be published. Required fields are marked *

Back To Top