ಇಂಧನ ಬೆಲೆ ಇಳಿಕೆ: ಪೆಟ್ರೋಲ್​ಗೆ 5 ರೂ., ಡೀಸೆಲ್‌ಗೆ​ 1 ರೂ. ಕಡಿತ

ಚಂಡೀಗಢ: ಇಂಧನ ಬೆಲೆಗಳ ಹೆಚ್ಚಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿರುವ ಪಂಜಾಬ್​ ಸರ್ಕಾರ ಪೆಟ್ರೋಲ್​ಗೆ 5 ರೂ. ಮತ್ತು ಡೀಸೆಲ್​ಗೆ 1 ರೂ. ಬೆಲೆ ಇಳಿಕೆ ಮಾಡಿದೆ.

ಪಂಜಾಬ್​ನ ಹಣಕಾಸು ಸಚಿವ ಮನ್​ಪ್ರೀತ್​ ಸಿಂಗ್​ ಬಾದಲ್​ ಬಜೆಟ್​ ಮಂಡನೆ ವೇಳೆ ಈ ವಿಷಯವನ್ನು ತಿಳಿಸಿದ್ದಾರೆ. ಪಂಜಾಬ್​ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ವ್ಯಾಟ್​ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರದಲ್ಲಿ ಗಣನೀಯ ಇಳಿಕೆಯಾಗಿದೆ. ನೂತನ ದರ ಸೋಮವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.

ಕಳೆದ ಐದು ದಿನಗಳಿಂದ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ನಾಲ್ಕು ಮೆಟ್ರೋಪಾಲಿಟನ್​ ಸಿಟಿಗಳಲ್ಲಿ ಪೆಟ್ರೋಲ್​ ಬೆಲೆ 15-16 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್​ ಬೆಲೆ 13-14 ಪೈಸೆ ಏರಿಕೆಯಾಗಿದೆ. (ಏಜೆನ್ಸೀಸ್​)