ಕುಡ್ಲದಲ್ಲಿ ನಟಸಾರ್ವಭೌಮ

ಮಂಗಳೂರು: ಕುಡ್ಲದಕ್ಲೆಗ್ ಎನ್ನ ನಮಸ್ಕಾರ. ತುಳು ಶುದ್ಧ ಬರ್ಪುಜಿ. ಒಂತೆ ಒಂತೆ ಗೊತ್ತುಂಡು… ಎನ್ನ ನಟಸಾರ್ವಭೌಮ ಪಿಕ್ಚರ್‌ನ್ ಮಾತೆರ‌್ಲಾ ತೂವೊಡು…ಸಪೋರ್ಟ್ ಮಲ್ಪೊಡು…

ಹೀಗೆ ನಟ ಪುನಿತ್‌ರಾಜ್‌ಕುಮಾರ್ ವಿನಂತಿಸುತ್ತಿದ್ದರೆ ಎಲ್ಲರ ಬಾಯಲ್ಲಿ ಅಪ್ಪು, ಅಪ್ಪು ಎಂಬ ಉದ್ಗಾರ. ನಗರದ ಸುಚಿತ್ರಾ ಚಿತ್ರಮಂದಿರಕ್ಕೆ ಭಾನುವಾರ ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ್ದ ಅವರು ಚಿತ್ರವನ್ನು ಎಲ್ಲರೂ ಚಿತ್ರಮಂದಿರದಲ್ಲಿ ವೀಕ್ಷಿಸಬೇಕು ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡರು.

ಕರಾವಳಿಯಲ್ಲಿ ತುಳು ಚಿತ್ರ ಹೆಚ್ಚು ನಿರ್ಮಾಣವಾಗುತ್ತಿದೆ. ಇದಕ್ಕೆ ಕರ್ನಾಟಕದಾದ್ಯಂತ ಬೆಂಬಲ ಬೇಕಿದೆ. ಎಲ್ಲರು ಕನ್ನಡ ಮತ್ತು ತುಳು ಚಿತ್ರಗಳನ್ನು ವೀಕ್ಷಿಸಬೇಕು ಎಂದ ಪುನಿತ್ ಉಮಿಲ್ ತುಳು ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದೇನೆ ಎಂದು ನೆನಪಿಸಿಕೊಂಡರು.

ಸುಚಿತ್ರಾ ಚಿತ್ರಮಂದಿರದ ವತಿಯಿಂದ ಪುನಿತ್‌ರಾಜ್‌ಕುಮಾರ್‌ನ್ನು ಗೌರವಿಸಲಾಯಿತು. ಅಭಿಮಾನಿಗಳು ಅಪ್ಪು ಜತೆಗೆ ಸೆಲ್ಫಿ ತೆಗೆಯಲು ಮುಗಿಬಿದ್ದರು. ನಟಸಾರ್ವಭೌಮ ಚಿತ್ರದ ನಿರ್ದೇಶಕ ಪವನ್ ಒಡೆಯರ್, ಸುಚಿತ್ರಾ ಚಿತ್ರಮಂದಿರದ ಮಾಲೀಕರು ಉಪಸ್ಥಿತರಿದ್ದರು.