ಗುಂಡ್ಲುಪೇಟೆ: ಬಂಡೀಪುರ ರಸ್ತೆಯಲ್ಲಿ ನಿಂತಿದ್ದ ಕಾಡಾನೆ ಕಂಡು ಪುಂಡಾಟಿಕೆ ನಡೆಸಿ ವಿಡಿಯೋ ವೈರಲ್ ಮಾಡಿದ್ದ ಯುವಕನಿಗೆ ಅರಣ್ಯ ಇಲಾಖೆ 25 ಸಾವಿರ ರೂ.ದಂಡ ವಿಧಿಸಿದೆ.
ಪಟ್ಟಣದ ನಿವಾಸಿ ಷಾಹುಲ್ ಹಮೀದ್ ಊಟಿ ರಸ್ತೆಯಲ್ಲಿ ಅಡ್ಡಲಾಗಿ ನಿಂತಿದ್ದ ಕಾಡಾನೆ ಸಮೀಪ ತೆರಳಿ ಕಿರುಚಾಡಿ ಕೀಟಲೆ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಎಚ್ಚೆತ್ತ ಅರಣ್ಯ ಇಲಾಖೆ ಯುವಕನನ್ನು ಪತ್ತೆ ಹಚ್ಚಿ 25 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಿದ ನಂತರ ಮತ್ತೊಂದು ವಿಡಿಯೋ ಮಾಡಿ, ತಾನು ಊಟಿಗೆ ಹೋಗುವಾಗ ಆನೆಯ ಮುಂದೆ ಫೋಟೋ ವಿಡಿಯೋ ಮಾಡಿದ ತಪ್ಪಿಗೆ 25 ಸಾವಿರ ರೂ. ದಂಡ ಕಟ್ಟಿದ್ದೇನೆ ಎಂದು ಹೇಳಿದ್ದಾನೆ.