ನಟಸಾರ್ವಭೌಮನ ಸುವರ್ಣಾವಕಾಶ

ಬೆಂಗಳೂರು: ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರಕ್ಕೆ ಮಂಗಳವಾರ (ನ.20) ಶೂಟಿಂಗ್ ಮುಕ್ತಾಯವಾಗಿ, ಚಿತ್ರತಂಡ ಕುಂಬಳಕಾಯಿ ಒಡೆದು ಸಂಭ್ರಮಿಸಿದೆ. ಇದೀಗ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ಜತೆಗೆ ಒಂದು ಚಾಲೆಂಜ್ ನೀಡಿದೆ ‘ನಟಸಾರ್ವಭೌಮ’ ಬಳಗ.

ಏನದು ಚಾಲೆಂಜ್? ‘ನಟಸಾರ್ವಭೌಮ’ ಚಿತ್ರದ ಮೊದಲ ಟೀಸರ್​ನಲ್ಲಿ ಪುನೀತ್ ಕಾಣಿಸಿಕೊಂಡ ರೀತಿಯಲ್ಲೇ ಅಭಿಮಾನಿಗಳು ವಿಡಿಯೋ ಮಾಡಬೇಕು. ನಂತರ ನಟಸಾರ್ವಭೌಮ ಎಂಬ ಹ್ಯಾಷ್​ಟ್ಯಾಗ್​ನಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್​ಲೋಡ್ ಮಾಡಬೇಕು. ಅದರಲ್ಲಿ ಯಾವುದು ಉತ್ತಮ ಎನಿಸುತ್ತದೆಯೋ ಅದನ್ನು ಸೆಲೆಕ್ಟ್ ಮಾಡಲಾಗುತ್ತದೆ. ಅಂದಹಾಗೆ, ಆ ರೀತಿ ಆಯ್ಕೆ ಆಗುವ ವ್ಯಕ್ತಿಗೆ ಬಂಪರ್ ಅವಕಾಶವೊಂದನ್ನು ಚಿತ್ರತಂಡ ನೀಡುತ್ತಿದೆ. ‘ನಟಸಾರ್ವಭೌಮ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಆಯ್ಕೆಯಾದ ವ್ಯಕ್ತಿಗೆ ಪುನೀತ್ ರಾಜ್​ಕುಮಾರ್ ಮತ್ತು ‘ನಟಸಾರ್ವಭೌಮ’ ತಂಡದ ಜತೆ ವೇದಿಕೆ ಹಂಚಿಕೊಳ್ಳುವ ಚಾನ್ಸ್ ಸಿಗಲಿದೆ. ಇನ್ನು,ಈ ಚಾಲೆಂಜ್​ನಲ್ಲಿ ಭಾಗವಹಿಸೋಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಎಲ್ಲ ವಯಸ್ಸಿನ ವ್ಯಕ್ತಿಗಳು ಇದರಲ್ಲಿ ಮುಕ್ತವಾಗಿ ಭಾಗವಹಿಸಬಹುದಾಗಿದೆ.

ಈ ಚಿತ್ರದಲ್ಲಿ ಪುನೀತ್ ಜರ್ನಲಿಸ್ಟ್ ಪಾತ್ರ ನಿಭಾಯಿಸಿದ್ದಾರೆ. ಮೊದಲ ಟೀಸರ್​ನಲ್ಲಿ ಕ್ಯಾಮರಾಗಳ ಮಧ್ಯದಿಂದ ಬಂದು ಸ್ಟೈಲ್ ಆಗಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ನಗುವ ದೃಶ್ಯವಿತ್ತು. ಪವನ್ ಒಡೆಯರ್ ಆಕ್ಷನ್-ಕಟ್ ಹೇಳಿರುವ ಈ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್​ಗೆ ರಚಿತಾ ರಾಮ್​ಅನುಪಮಾ ಪರಮೇಶ್ವರನ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಾಕ್​ಲೈನ್ ವೆಂಕಟೇಶ್ ನಿರ್ವಣದಲ್ಲಿ ಸಿದ್ಧಗೊಂಡಿರುವ ‘ನಟಸಾರ್ವಭೌಮ’ ಚಿತ್ರಕ್ಕೆ ಡಿ. ಇಮ್ಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ನನ್ನ ಸ್ಟೈಲ್​ನಲ್ಲಿ ನಟಿಸುವ ನಟಸಾರ್ವಭೌಮನಿಗೆ ನಮ್ಮ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ವೇದಿಕೆ ಹಂಚಿಕೊಳ್ಳುವ ಅವಕಾಶ ನೀಡುವ ಈ ಚಾಲೆಂಜನ್ನು ಯಾರು ಬೇಕಾದರೂ ಮಾಡಬಹುದು. ಹ್ಯಾಷ್​ಟ್ಯಾಗ್ ನಟಸಾರ್ವಭೌಮ ಅಂತ ಟೈಪ್ ಮಾಡಿ, ಸೋಷಿಯಲ್​ವಿುೕಡಿಯಾದಲ್ಲಿ ಶೇರ್ ಮಾಡಿ.

| ಪುನೀತ್ ರಾಜ್​ಕುಮಾರ್ ನಟ