ಗಂಧದಗುಡಿ ಚಿತ್ರಪ್ರದರ್ಶನಕ್ಕೆ ಒತ್ತಾಯಿಸಿ ಪ್ರತಿಭಟನೆ: ಬಿಡುಗಡೆ ಮಾಡದಿದ್ರೆ ಉಗ್ರ ಹೋರಾಟದ ಎಚ್ಚರಿಕೆ

1 Min Read
ಗಂಧದಗುಡಿ ಚಿತ್ರಪ್ರದರ್ಶನಕ್ಕೆ ಒತ್ತಾಯಿಸಿ ಪ್ರತಿಭಟನೆ: ಬಿಡುಗಡೆ ಮಾಡದಿದ್ರೆ ಉಗ್ರ ಹೋರಾಟದ ಎಚ್ಚರಿಕೆ

ರಾಮನಗರ/ಉತ್ತರ ಕನ್ನಡ: ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಗಂಧದಗುಡಿ ಚಿತ್ರ ನಾಳೆ ಬಿಡುಗಡೆಯಾಗಲಿದೆ. ಆದರೆ, ರಾಜ್ಯದ ಕೆಲವೆಡೆ ಚಿತ್ರ ಪ್ರದರ್ಶನವಾಗದ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ಬೀದಿಗೆ ಇಳಿದಿದ್ದಾರೆ.

ರಾಮನಗರದಲ್ಲಿ ಪವರ್ ಸ್ಟಾರ್ ಪುನೀತ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ರಾಮನಗರ, ಚನ್ನಪಟ್ಟಣ, ಮದ್ದೂರಿನಲ್ಲಿ ಚಿತ್ರ ತೆರೆಕಾಣುತ್ತಿಲ್ಲ. ಕಾಂತಾರಾ, ಹೆಡ್ ಬುಷ್ ಸಿನಿಮಾ ಪ್ರದರ್ಶನದಿಂದ ಚಿತ್ರಮಂದಿರ ಕೊರತೆಯಾಗಿದೆ. ಹೀಗಾಗಿ ಗಂದಧಗುಡಿ ವಿತರಕರ ವಿರುದ್ಧ ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಚಿತ್ರ ಮಂಡಳಿಗೆ ದೂರು ನೀಡಲು ಚನ್ನಪಟ್ಟಣದಿಂದ ಬೆಂಗಳೂರಿಗೆ ಅಭಿಮಾನಿಗಳು ಹೊರಟಿದ್ದಾರೆ. ಜಯಣ್ಣ ಕಂಬೈನ್ಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದು, ಸಿನಿಮಾ ಪ್ರದರ್ಶನ ಮಾಡಿದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕನ್ನಡದಲ್ಲೂ ಅಪ್ಪು ನಟನೆಯ ಗಂಧದ ಗುಡಿ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಶಿರಸಿಯ ನಟರಾಜ ಚಿತ್ರಮಂದಿರದ ಎದುರು ಅಪ್ಪು ಅಭಿಮಾನಿಗಳ ಪ್ರತಿಭಟನೆ ನಡೆಸಿದ್ದಾರೆ. ಅಪ್ಪು ಕೊನೆ ಚಿತ್ರವನ್ನು ನಾಳೆ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡುವಂತೆ ನಟರಾಜ ಚಿತ್ರಮಂದಿರ ಸಿಬ್ಬಂದಿಗಳಿಗೆ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.

ಅಂದಹಾಗೆ ಗಂಧದ ಗುಡಿ ಒಂದ ಸಾಕ್ಷ್ಯಾಚಿತ್ರವಾಗಿದ್ದು, ಪುನೀತ್ ಅವರ ಒಂದು ಅದ್ಭುತ ಕನಸಾಗಿದೆ. ಈ ಸಾಕ್ಷ್ಯಾಚಿತ್ರದಲ್ಲಿ ಕರ್ನಾಟಕದ ಅರಣ್ಯಗಳು ಹಾಗೂ ವನ್ಯಜೀವಿ ಪ್ರಪಂಚದ ಅದ್ಭುತ ದೃಶ್ಯವೈಭವವಿದೆ. ಇದಕ್ಕಾಗಿ ಪುನೀತ್​ ಇಡೀ ಕರುನಾಡನ್ನು ಸುತ್ತಿದ್ದರು. ಅಪ್ಪು ಅಕಾಲಿಕ ಮರಣ ಹಿನ್ನೆಲೆಯಲ್ಲಿ ಗಂಧದ ಗುಡಿ ಸಾಕ್ಷ್ಯಾ ಚಿತ್ರಕ್ಕೆ ಸಿನಿಮಾ ರೂಪ ಕೊಟ್ಟು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ನಾಳೆ (ಅ.28) ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಕೆಲವೆಡೆ ಚಿತ್ರಮಂದಿರಗಳ ಕೊರತೆ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನವಾಗುತ್ತಿಲ್ಲ. ಇದು ಅಪ್ಪು ಅಭಿಮಾನಿಗಳಿಗೆ ಅಸಮಾಧಾನ ತರಿಸಿದೆ. (ದಿಗ್ವಿಜಯ ನ್ಯೂಸ್​)

ಜೆಡಿಎಸ್ ಪಂಚರತ್ನ ಯಾತ್ರೆಗೆ ಚಾಲನೆ: ಕನಸಿನ ಯಾತ್ರೆಯ ಉದ್ದೇಶಗಳ ಬಗ್ಗೆ ಎಚ್​ಡಿಕೆ ವಿವರಿಸಿದ್ದು ಹೀಗೆ…

ಭಾರತಕ್ಕೆ ಕಾದಿದೆಯಾ ಅಪಾಯ? ಹೊಸ ವರ್ಷ ಸಮೀಪಿಸುತ್ತಿದ್ದಂತೆ ಚರ್ಚೆಯಾಗ್ತಿದೆ ಬಾಬಾ ವಂಗಾರ ಈ ಭವಿಷ್ಯವಾಣಿ

ಕಾಂಗ್ರೆಸ್​ ಮಹಿಳಾ ಘಟಕದ ಅಧ್ಯಕ್ಷೆ ವಿರುದ್ಧ ಭಿನ್ನಮತ ಸ್ಫೋಟ: ಸ್ಥಾನದಿಂದ ಪುಷ್ಪಾ ಅಮರನಾಥ್​ರನ್ನ ಕೆಳಗಿಳಿಸಲು ಪಟ್ಟು

See also  ಆಸ್ಕರ್​ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿದ ದಕ್ಷಿಣ ಕೊರಿಯನ್​ ಪಾರಸೈಟ್​ ಚಿತ್ರ; ಹೀಗಿದೆ ಪ್ರಶಸ್ತಿ ಪಡೆದ ಚಿತ್ರಗಳ ಪಟ್ಟಿ
Share This Article