ನಟಸೌರ್ವಭೌಮನಿಗೆ ಒಳ್ಳೆಯ ರೆಸ್ಪಾನ್ಸ್‌, ಅಭಿಮಾನಿಗಳಿಗೆ ಸದಾ ಚಿರಋಣಿ ಎಂದ ಪುನೀತ್‌ ರಾಜ್‌ಕುಮಾರ್‌

ಬೆಂಗಳೂರು: ನಟಸಾರ್ವಭೌಮ ಚಿತ್ರಕ್ಕೆ ತುಂಬಾ ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ಅಭಿಮಾನಿಗಳಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ತಿಳಿಸಿದರು.

ತ್ರಿವೇಣಿ ಥಿಯೇಟರ್‌ಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಭಿಮಾನಿಗಳಿಗಾಗಿಯೇ ಈ ಸಿನಿಮಾ ಮಾಡಿದ್ದೇನೆ. ಇನ್ನು ಇದು ಮೊದಲನೆಯ ದಿನ. ಮುಂದಿನ ದಿನಗಳಲ್ಲಿ ಯಾವ ರೀತಿ ರೆಸ್ಪಾನ್ಸ್ ಬರುತ್ತದೆ ಎಂದು ಕಾಯುತ್ತಿದ್ದೇನೆ ಎಂದರು.

ಈಗಾಗಲೇ ರಾಘವೇಂದ್ರ ರಾಜ್‌ಕುಮಾರ್‌ ಕುಟುಂಬವು ಸಿನಿಮಾ ವೀಕ್ಷಿಸುತ್ತಿದ್ದು, ಥಿಯೇಟರ್‌ನಲ್ಲಿ 5 ನಿಮಿಷಗಳಷ್ಟೇ ಇದ್ದ ಅಪ್ಪು ಪ್ರೇಕ್ಷಕರಿಗೆ ಕೈ ಬೀಸಿ ಅಲ್ಲಿಂದ ಹೊರಟರು.

ಇದಕ್ಕೂ ಮುನ್ನ ನಟಸಾರ್ವಭೌಮನ ಸಕ್ಸಸ್‌ಗಾಗಿ ಆನಂದ್ ರಾವ್ ಸರ್ಕಲ್‌ನ ಗಣೇಶನಿಗೆ ಪುನೀತ್‌ ರಾಜ್‌ಕುಮಾರ್‌ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಣ್ಣಮ್ಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಬಳೇಪೇಟೆಯಲ್ಲಿರುವ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು. (ದಿಗ್ವಿಜಯ ನ್ಯೂಸ್)