ಸಂಡೂರು: ವಾಲ್ಮೀಕಿ ನಿಗಮದ 187 ಕೋಟಿ ರೂ. ಅನ್ನು ಸಚಿವರು, ಶಾಸಕರು, ಸಂಸದರು ಚುನಾವಣೆಗಳಿಗೆ ಬಳಕೆ ಮಾಡಿದ್ದಾರೆ ಎಂದು ಎಂಎಲ್ಸಿ ಸಿ.ಟಿ.ರವಿ ದೂರಿದರು.
ಪಟ್ಟಣದಲ್ಲಿ ಬುಧವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜನತೆಗೆ ನ್ಯಾಯ ಕೊಡಿಸುವ ಬದಲು ಪತ್ನಿಗೆ ನ್ಯಾಯ ಕೊಡಿಸಲು ಪರದಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಪಂಚರ್ ಆಗಿವೆ. ಶಕ್ತಿ ಯೋಜನೆ ಹಣ ಆರು ತಿಂಗಳಿಗೊಮ್ಮೆ ಎರಡು ತಿಂಗಳದು ಹಾಕುತ್ತಾರೆ.
ಹಾಲಿನಿಂದ ಆಲ್ಕೋಹಾಲ್‌ವರೆಗೆ ಬೆಲೆ ಏರಿಕೆಯಾಗಿವೆ. ಈಗ ರೇಷನ್ ಕಾರ್ಡ್ ರದ್ದುಗೊಳಿಸಲು ಮುಂದಾಗಿದ್ದಾರೆ. 20 ರೂ. ಇದ್ದ ಬಾಂಡ್ ಪೇಪರ್ ಬೆಲೆ 100 ರೂ. ಆಗಿದೆ ಕಳೆದ 15-16 ತಿಂಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಕ್ಫ್ ಆಸ್ತಿ ಲಪಟಾಯಿಸಿರುವ ಬಲಾಢ್ಯ ಮುಸ್ಲಿಂ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಬಡವರ ಭೂಮಿಯನ್ನು ಕಿತ್ತುಕೊಳ್ಳಲು ಸರ್ಕಾರ ಹೊರಟಿದೆ ಎಂದರು.’
ಮಾಜಿ ಎಂಎಲ್ಸಿ ಸತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ, ತಾಲೂಕು ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಜಿಲ್ಲಾ ಕಾರ್ಯದರ್ಶಿ ಕುಮಾರನಾಯ್ಕ, ತೋರಣಗಲ್ ಶಂಕ್ರಪ್ಪ, ಬೊಪ್ಪಾಖಾನ್ ಕುಮಾರಸ್ವಾಮಿ. ಕೆ.ಯರ‌್ರಿಸ್ವಾಮಿ, ಚಿರಂಜಿವಿ ಇತರರಿದ್ದರು.