ಆಗಸ್ಟ್‌ನಲ್ಲಿ ಪಂಪ್‌ವೆಲ್ ಪ್ಲೈಓವರ್ ಪೂರ್ಣ

ಮಂಗಳೂರು: ಪಂಪ್‌ವೆಲ್ ಪ್ಲೈಓವರ್ ಕಾಮಗಾರಿ ಪ್ರಗತಿಯಲ್ಲಿದ್ದು, ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಆಗಸ್ಟ್ ಮೊದಲ ವಾರದಲ್ಲಿ ವಾಹನ ಸಂಚಾರಕ್ಕೆ ತೆರವುಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಬುಧವಾರ ಪ್ಲೈಓವರ್‌ಗಳ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಪ್ಲೈಓವರ್ ಕಾಮಗಾರಿ ಬಗ್ಗೆ ಪ್ರತೀ 10 ದಿನಕ್ಕೊಮ್ಮೆ ಸಭೆ ನಡೆಸಿ, ಸೂಚನೆ ನೀಡಲಾಗುವುದು. ಮುಂದಿನ ಒಂದು ತಿಂಗಳೊಳಗೆ ಉಜ್ಜೋಡಿ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಜಲ ಸಂಕಷ್ಟಕ್ಕೆ ಎತ್ತಿನಹೊಳೆ ಕಾರಣ
ಮಂಗಳೂರಿನ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ರಾಜ್ಯ ಸರ್ಕಾರ ನೇತ್ರಾವತಿ ನದಿಯ ಮೂಲದಿಂದ ಎತ್ತಿನಹೊಳೆ ಯೋಜನೆ ಮಾಡಿ ಬಯಲುಸೀಮೆಗೆ ನೀರು ತೆಗೆದುಕೊಂಡು ಹೋಗಲು ವ್ಯರ್ಥ ಹಣ ಸುರಿಯುತ್ತಿದೆ. ಇದು ಹಣಕ್ಕಾಗಿ ಮಾಡುವ ಯೋಜನೆ. ಬಯಲು ಸೀಮೆಗೆ ನೀರು ಕೊಡಲು ವಿರೋಧವಿಲ್ಲ. ಆದರೆ ನೇತ್ರಾವತಿ ಹಾಗೂ ಪಶ್ಚಿಮಘಟ್ಟವನ್ನು ಹಾಳುಮಾಡಿ ಯೋಜನೆ ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ನಳಿನ್ ಹೇಳಿದರು.

ಜೂ.10ಕ್ಕೆ ತೊಕ್ಕೊಟ್ಟು ಮೇಲ್ಸೇತುವೆ
ಉಳ್ಳಾಲ: ತಾಂತ್ರಿಕ ಸಮಸ್ಯೆಗಳಿಂದಾಗಿ ತೊಕ್ಕೊಟ್ಟು ಮತ್ತು ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಕುಂಠಿತವಾಗಿದ್ದರೂ ಈಗ ಶೇ.98 ಕೆಲಸ ಮುಗಿದಿದ್ದು, ಮುಂದಿನ ವಾರ ಪೂರ್ಣಗೊಳ್ಳಲಿದೆ ಎಂದು ಸಂಸದ ನಳಿನ್ ಹೇಳಿದರು. ಬುಧವಾರ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜೂನ್ 10ರಂದು ಸೇತುವೆ ಲೋಕಾರ್ಪಣೆ ಆಗಲಿದೆ. ವಾಹನ ಸವಾರರು, ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

Leave a Reply

Your email address will not be published. Required fields are marked *