ಪುಲ್ವಾಮಾ ತನಿಖೆ ವಿಳಂಬ

ನವದೆಹಲಿ: ಮುಂಬೈ ಉಗ್ರ ದಾಳಿ ತನಿಖೆಯಲ್ಲಿ ಅನುಸರಿಸುತ್ತಿರುವ ಧೋರಣೆಯನ್ನೇ ಪುಲ್ವಾಮಾ ದಾಳಿ ತನಿಖೆಯಲ್ಲೂ ಪಾಕಿಸ್ತಾನ ಮುಂದುವರಿಸಿದೆ. ಹಲವು ನೆಪಗಳನ್ನು ಮುಂದಿಟ್ಟುಕೊಂಡು ತನಿಖೆಯನ್ನು ಆದಷ್ಟು ವಿಳಂಬಗೊಳಿಸಲು ಯತ್ನಿಸುತ್ತಿದೆ ಎಂಬ ಅನುಮಾನ ಬಲಗೊಳ್ಳುತ್ತಿದೆ.

ಪುಲ್ವಾಮಾದಲ್ಲಿ ಯೋಧರ ವಾಹನದ ಮೇಲಿನ ದಾಳಿಗೆ ಜೈಷ್ -ಎ-ಮೊಹಮದ್ ಉಗ್ರ ಸಂಘಟ ನೆಯೇ ಕಾರಣ ಎಂಬುದನ್ನು ಪತ್ತೆ ಮಾಡಿ, ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಪಾಕಿಸ್ತಾನಕ್ಕೆ ಭಾರತ ನೀಡಿದೆ. ಆತ್ಮಾಹುತಿ ದಾಳಿಕೋರ ಆದಿಲ್ ದರ್​ನ ತಪ್ಪೊಪ್ಪಿಗೆ ವಿಡಿಯೋವನ್ನು ಕೂಡ ಪಾಕ್​ಗೆ ಹಸ್ತಾಂತರಿಸಿದೆ.

ಗನ್ ಸಂಖ್ಯೆ ಕೊಡಿ: ಆತ್ಮಾಹುತಿ ದಾಳಿಕೋರ ದರ್ ಬಳಸಿದ್ದಾನೆ ಎನ್ನಲಾದ ಗನ್ ಮಾದರಿ, ಅದರ ಉತ್ಪಾದಕರು, ಗುರುತಿನ ಸಂಖ್ಯೆ, ಫೆ.14ರಂದು ನಡೆದ ಪುಲ್ವಾಮಾ ದಾಳಿ ಕುರಿತು ದಾಖಲಿಸಲಾದ ಎಫ್​ಐಆರ್ ಪ್ರತಿಯನ್ನು ನೀಡಿ ಎಂದು ಪಾಕಿಸ್ತಾನ ಬೇಡಿಕೆ ಇಟ್ಟಿದೆ. 40 ಸಿಆರ್​ಪಿಎಫ್

ಯೋಧರನ್ನು ಬಲಿಪಡೆದ ಪುಲ್ವಾಮಾ ಆತ್ಮಾಹುತಿ ದಾಳಿ ಕುರಿತಾದ ಎಲ್ಲ ಸಾಕ್ಷ್ಯ ಮತ್ತು ಪೂರಕ ದಾಖಲೆಗಳನ್ನು ಫೆ.27ರಂದೇ ಭಾರತ, ಪಾಕಿಸ್ತಾನಕ್ಕೆ ಸಲ್ಲಿಸಿದೆ.

17 ಜೈಷ್ ಭಯೋತ್ಪಾದಕರು ಖತಂ

ಪುಲ್ವಾಮಾ ದಾಳಿ ಬಳಿಕ ಜಮ್ಮು- ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿರುವ ಕಾರ್ಯಾಚರಣೆಯಲ್ಲಿ 17 ಜೈಷ್ ಸಂಘಟನೆ ಉಗ್ರರನ್ನು ಹತ್ಯೆಗೈಯಲಾಗಿದೆ. ಒಟ್ಟು 3 ತಿಂಗಳಲ್ಲಿ ವಿವಿಧ ಕಾರ್ಯಾಚರಣೆಯಲ್ಲಿ 31 ಜೈಷ್ ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರಳಿಸಿವೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಪುಲ್ವಾಮಾ ದಾಳಿ ಬಳಿಕ ಕಾನೂನು ಸುವವ್ಯಸ್ಥೆಗಾಗಿ ಕೇಂದ್ರ ಸರ್ಕಾರ ಕಣಿವೆ ರಾಜ್ಯದಲ್ಲಿ 10 ಸಾವಿರ ಅರೆಸೈನಿಕ ಪಡೆಗಳನ್ನು ನಿಯೋಜಿಸಿತ್ತು. 2018ರಲ್ಲಿ ಭದ್ರತಾ ಪಡೆಗಳು ಜಮ್ಮು- ಕಾಶ್ಮೀರದಲ್ಲಿ ಒಟ್ಟು 257 ಉಗ್ರರನ್ನು ಹೊಡೆದುರುಳಿಸಿವೆ.

ವಾಟ್ಸ್​ಆಪ್ ಸಂಖ್ಯೆ ಸಾಕ್ಷ್ಯ ಸಲ್ಲಿಕೆ

ಆತ್ಮಾಹುತಿ ದಾಳಿಗೂ ಮುಂಚಿನ ತಪ್ಪೊಪ್ಪಿಗೆ ವಿಡಿಯೋದಲ್ಲಿ ದರ್ ಹಲವು ಶಸ್ತ್ರಗಳನ್ನು ಹಿಡಿದಿದ್ದಾನೆ. ತಾನೊಬ್ಬ ಜೈಷ್ ಉಗ್ರ ಸಂಘಟನೆ ಸದಸ್ಯ ಎಂದು ಒಪ್ಪಿಕೊಂಡಿದ್ದಾನೆ. ದಾಳಿಗಾಗಿಯೇ ತನ್ನನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾನೆ. ಜೈಷ್ -ಎ-ಮೊಹಮದ್ ಸದಸ್ಯರೊಂದಿಗೆ ದರ್ ಚರ್ಚೆ ನಡೆಸಿ ದಾಳಿಗೆ ಮಾರ್ಗದರ್ಶನ ಪಡೆದ ವಾಟ್ಸ್​ಆಪ್ ಸಂಖ್ಯೆಯನ್ನು ಕೂಡ ಭಾರತ ಸಾಕ್ಷಿಯಾಗಿ ಪಾಕಿಸ್ತಾನಕ್ಕೆ ನೀಡಿದೆ. ಹಾಗಿದ್ದು ವಿಳಂಬ ಮಾಡುವ ಉದ್ದೇಶದಿಂದಲೇ ಪಾಕಿಸ್ತಾನ, ದರ್ ದಾಳಿ ವೇಳೆ ಹಿಡಿದಿದ್ದ ಗನ್ ಸಂಖ್ಯೆ ಹಾಗೂ ತಯಾರಿಕೆ ಕಂಪನಿ ಹೆಸರು ನೀಡಿ ಎಂದು ಬೇಡಿಕೆ ಇಟ್ಟಿದೆ.

# ಜೈಷ್-ಎ-ಮೊಹಮದ್ ಸಂಘಟನೆ ದಾಳಿಗೆ ಕಾರಣ ಎಂದು ದರ್ ಹೇಳಿದ್ದಾನೆ. ಭಾರತ ಕೂಡ ಸಾಕ್ಷ್ಯ ನೀಡಿದೆ. ಆದರೂ ಸಂಘಟನೆ ವಿರುದ್ಧ ಯಾವುದೇ ಕ್ರಮ ಇಲ್ಲ.
# ಜೈಷ್ ಉಗ್ರರ ನೆಲೆಗಳು, 90 ನಾಯಕರ ಬಗ್ಗೆಯೂ ವಿಸõತ ಮಾಹಿತಿ ನೀಡಲಾಗಿದೆ. ಭಾರತ ಸೂಚಿಸಿರುವ 22 ಸ್ಥಳಗಳಲ್ಲಿ ಉಗ್ರರು ಇಲ್ಲವೇ ಇಲ್ಲ ಎಂದು ಪಾಕ್ ಮೊಂಡುತನ ತೋರುತ್ತಿದೆ. ್ಞ ಫೆಬ್ರವರಿಯಲ್ಲಿಯೇ ದಾಳಿಯ ದಾಖಲೆಗಳನ್ನು ನೀಡಿದ್ದರೂ, ಎಫ್​ಐಆರ್ ಹಾಗೂ ಸಾಕ್ಷ್ಯಗಳ ಹೇಳಿಕೆ ಸರಿಯಾಗಿ ಕೊಟ್ಟಿಲ್ಲ ಎಂದು ಪಾಕ್ ತಗಾದೆ.
# ವಾಹನದ ಮೇಲೆ ದಾಳಿ ನಡೆಸಿದ ಬಾಂಬ್ ತಯಾರಿಸಲಾದ ಜಾಗ ಮಾಹಿತಿ ನೀಡಿ, ಜೈಷ್ ಸಂಘಟನೆ ಜತೆಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ 90 ನಾಯಕರ ವಿವರ ನೀಡಿ ಎಂದು ಪಾಕ್ ಒತ್ತಾಯ. ತನ್ನ ತನಿಖೆಯಿಂದ ಬಹಿರಂಗ ಆಗಬೇಕಿರುವ ಮಾಹಿತಿ ನೀಡುವಂತೆ ಭಾರತಕ್ಕೆ ತಾಕೀತು .
# ದರ್ ಜತೆಗೆ ವಾಟ್ಸ್​ಆಪ್​ನಲ್ಲಿ ಸಂವಹನ ನಡೆಸಿದ ಮೊಹಮದ್ ಹುಸ್ಸೇನ್ ಎಂಬಾತನ ಮಾಹಿತಿಯನ್ನು ಭಾರತ ನೀಡಿದೆ. ಗ್ರೂಪ್ ಅಡ್ಮಿನ್ ಬಳಸಿರುವ ಜಿಎಸ್​ಎಂ ಸಂಖ್ಯೆ ನೀಡಿ, ಇಂಟರ್​ನೆಟ್ ಬಳಕೆ ಐಪಿ ವಿಳಾಸ ನೀಡಿ ಎಂದು ಪಾಕ್​ನಿಂದ ಬೇಡಿಕೆ.

ಕಾಶ್ಮೀರದಲ್ಲಿ ಸಿಆರ್​ಪಿಎಫ್ ಯೋಧರ ಪ್ರಯಾಣಕ್ಕೆ ಹೊಸ ನಿಯಮ ಜಾರಿ

ಜಮ್ಮು- ಕಾಶ್ಮೀರದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಯೋಧರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ರವಾನಿಸುವಾಗ ಒಂದು ಬಾರಿಗೆ ಗರಿಷ್ಠ 40 ವಾಹನ ಮಾತ್ರ ಸಂಚರಿಸಬೇಕು. ಈ ವಾಹನಗಳಿಗೆ ಬೆಂಗಾವಲು ನೀಡುವ ಹೊಣೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಗೆ ವಹಿಸಬೇಕು ಎಂದು ಸೂಚಿಸ ಲಾಗಿದೆ. ಪುಲ್ವಾಮಾದಲ್ಲಿ ಸಿಆರ್​ಪಿಎಫ್ ಯೋಧರಿದ್ದ ವಾಹನದ ಮೇಲೆ ದಾಳಿ ನಡೆದು, 40 ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಅರೆಸೇನಾ ಪಡೆಗಳನ್ನು ರವಾನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಸಿಆರ್​ಪಿಎಫ್ ಮುಖ್ಯ ಕಾರ್ಯಾಲಯ ಹೊರಡಿಸಿರುವ ಹೊಸ ನಿರ್ವಹಣಾ ಪ್ರಕ್ರಿಯೆಯಲ್ಲಿ (ಎಸ್​ಒಪಿ)ಈ ಅಂಶವನ್ನು ಉಲ್ಲೇಖಿಸಿದೆ.

Leave a Reply

Your email address will not be published. Required fields are marked *