ಪಾಕ್​ ವಿರುದ್ಧ ಧಿಕ್ಕಾರ ಕೂಗುವ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಚಿಕನ್​ ಲೆಗ್​ ಪೀಸ್​ಮಾರಿದ ಹೊಟೇಲ್​ ಮಾಲೀಕ

ಛತ್ತೀಸ್​ಗಢ: ಸಿಆರ್​ಪಿಎಫ್​ ಯೋಧರ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿ ಇಡೀ ವಿಶ್ವವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ನೆರೆರಾಷ್ಟ್ರ ಪಾಕಿಸ್ತಾನ ತಿರುಗಿ ಬೀಳುವ ಬಗ್ಗೆ ಭಾರತ ಇಂಗಿತ ವ್ಯಕ್ತಪಡಿಸುತ್ತಿದೆ. ಜತೆಗೆ ತನ್ನದೇ ಆದ ಧಾಟಿಯಲ್ಲಿ ಪಾಕ್​ ವಿರುದ್ಧ ವಿಭಿನ್ನ ದಾಳಿ ಸಂಘಟಿಸಿ ಯೋಧರ ಸಾವಿಗೆ ಸಂತಾಪ ಸೂಚಿಸುತ್ತಿದೆ.

ಛತ್ತೀಸ್​ಗಢದ ಜಗದಲ್ಪುರದಲ್ಲಿರುವ ಹೊಟೇಲ್​ ಮಾಲೀಕ ಅಂಜಲ್​ ಸಿಂಗ್, ಪಾಕ್​ ವಿರುದ್ಧ ಧಿಕ್ಕಾರ ಕೂಗುವ ಗ್ರಾಹಕರಿಗೆ 10 ರೂ. ರಿಯಾಯಿತಿ ದರದಲ್ಲಿ ಚಿಕನ್​ ಲೆಗ್​ ಪೀಸ್​ ನೀಡುವ ಮೂಲಕ ಪುಲ್ವಾಮಾ ದಾಳಿಯನ್ನು ವಿರೋಧಿಸಿ ವಿಭಿನ್ನ ಪ್ರತಿಭಟನೆ ಮಾಡುತ್ತಿದ್ದಾರೆ.

ಪಾಕಿಸ್ತಾನ ಇದುವರೆಗೂ ಮಾನವೀಯತೆಯನ್ನು ಗೌರವಿಸಿಲ್ಲ. ಮುಂದೆಯೂ ಗೌರವಿಸುವುದಿಲ್ಲ. ಹೀಗಾಗಿ ಎಲ್ಲರೂ ಪಾಕಿಸ್ತಾನದ ವಿರುದ್ಧ ಧಿಕ್ಕಾರ ಕೂಗಿ ಜನರು ತಮ್ಮೆಲ್ಲ ಆಕ್ರೋಶವನ್ನು ಹೊರಹಾಕಬೇಕು ಎಂದು ಅಂಜಲ್​ ಸಿಂಗ್​ ಹೇಳಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರದ ಪಾಕ್​ನೊಂದಿಗಿನ ವ್ಯಾಪಾರ ಸಂಬಂಧವನ್ನು ಕಡಿದುಕೊಂಡಿದೆ. ಚಿತ್ರರಂಗದಲ್ಲಿ ಪಾಕ್​ ಕಲಾವಿದರಿಗೆ ನಿರ್ಭಂಧ ಹೇರಲಾಗಿದ್ದು, ಹಲವು ಕ್ರೀಡಾಂಗಣದಲ್ಲಿರುವ ಪಾಕ್​ ಕ್ರಿಕೆಟಿಗರ ಫೋಟೋಗಳನ್ನು ತೆರವುಗೊಳಿಸಲಾಗಿದೆ. ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ​ ಆಡದಿರುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಪಾಕ್​ ವಿರುದ್ಧ ಭಾರತ ಆಕ್ರೋಶ ವ್ಯಕ್ತಪಡಿಸುತ್ತಿದೆ. (ಏಜೆನ್ಸೀಸ್​)