ಪ್ರಧಾನಿ ಮೋದಿ, ಇಮ್ರಾನ್​ ಖಾನ್​ ನಡುವೆ ಪುಲ್ವಾಮಾ ದಾಳಿ ಎಂಬ ಮ್ಯಾಚ್​ ಫಿಕ್ಸಿಂಗ್​: ಬಿ.ಕೆ. ಹರಿಪ್ರಸಾದ್​

ನವದೆಹಲಿ: ಪುಲ್ವಾಮಾ ದಾಳಿಯ ವಿಚಾರದಲ್ಲಿ ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆ ರಾಷ್ಟ್ರ ರಾಜಕೀಯದಲ್ಲಿ ಹೊಸ ವಿವಾದವನ್ನು ಹುಟ್ಟು ಹಾಕಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್​, ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಉಗ್ರರ ದಾಳಿಯು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ನಡುವಿನ ಮ್ಯಾಚ್​ ಫಿಕ್ಸಿಂಗ್​ ಎಂದು ಗಂಭೀರ ಆರೋಪ ಮಾಡಿದ್ದಾರೆ.​

ಪುಲ್ವಾಮಾ ದಾಳಿಯ ನಂತರ ನಡೆಯುತ್ತಿರುವ ಘಟನಾವಳಿಗಳನ್ನು ಗಮನಿಸಿದಾಗ ಮೋದಿ ಅವರು ಇಮ್ರಾನ್​ ಖಾನ್​ರೊಂದಿಗೆ ಮ್ಯಾಚ್​ ಫಿಕ್ಸಿಂಗ್​ ಮಾಡಿಕೊಂಡಂತೆ ಕಾಣುತ್ತಿದೆ. ಉಭಯ ನಾಯಕರಿಗೆ ಅರಿವಿಲ್ಲದೆಯೇ ಈ ದಾಳಿಗಳು ನಡೆಯಲು ಸಾಧ್ಯವಿಲ್ಲ. ಮ್ಯಾಚ್​ ಫಿಕ್ಸಿಂಗ್​ ಆಗಿದ್ದರೆ, ಈ ಕುರಿತು ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ಮಂಗಳವಾರ ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಅವರು ಕಾಂಗ್ರೆಸ್​ ವಿರುದ್ಧ ಗಂಭೀರ ಆರೋಪ ಮಾಡಿ, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್​ ರಕ್ಷಣಾ ಪಡೆಗಳ ನೈತಿಕತೆಯನ್ನು ಪ್ರಶ್ನಿಸುವಂಥ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಬಾಲಾಕೋಟ್​ ವೈಮಾನಿಕ ದಾಳಿಯ ವಿಚಾರವಾಗಿ ಪ್ರತಿಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆಗಳು ಅಧ್ಯಕ್ಷ ರಾಹುಲ್​ ಗಾಂಧಿಯ ಆಶೀರ್ವಾದದಿಂದ ಬಂದವುಗಳಾಗಿವೆ ಎಂದು ಕಿಡಿಕಾರಿದ್ದರು. (ಏಜೆನ್ಸೀಸ್​)

One Reply to “ಪ್ರಧಾನಿ ಮೋದಿ, ಇಮ್ರಾನ್​ ಖಾನ್​ ನಡುವೆ ಪುಲ್ವಾಮಾ ದಾಳಿ ಎಂಬ ಮ್ಯಾಚ್​ ಫಿಕ್ಸಿಂಗ್​: ಬಿ.ಕೆ. ಹರಿಪ್ರಸಾದ್​”

  1. If a dog bites a man we can take rabies injection but if a man bites a raby infected dog people say Huccha nanmagane. Hari prasad is a man who…..
    Please donot vote on the basis of caste. India is burning under islamic terrorisum suported by Congress. They want to divert your attention from burning issues of security by confusing real issue. Hari prasad is worst than Huchha venkat

Comments are closed.