More

    ಚಿತ್ರದುರ್ಗದಲ್ಲಿ ಜಿಲ್ಲಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ‌್ಯಕ್ರಮಕ್ಕೆ ಚಾಲನೆ

    ಚಿತ್ರದುರ್ಗ:ದೇಶದ ಪೋಲಿಯೋ ಗೆಲುವನ್ನು ಮುಂದುವರಿಸೋಣ ಘೋಷಣೆಯೊಂದಿಗೆ ಈ ಬಾರಿಯ ಪಲ್ಸ್ ಪೋಲಿಯೋ ಲಸಿಕೆ ಕಾರ‌್ಯಕ್ರಮ ಇಂದು ಜಿಲ್ಲಾದ್ಯಂತ ಆರಂಭವಾಯಿತು. ನಗರದ ಬುದ್ಧ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಜಿಪಂ ಸಿಇಒ ಸಿ.ಸತ್ಯಭಾಮಾ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಕಾರ‌್ಯಕ್ರಮ ಉದ್ಘಾಟಿಸಿದರು.

    ಈ ವೇಳೆ ಮಾತನಾಡಿದ ಡಿಎಚ್‌ಒ ಡಾ.ಸಿಎಲ್.ಪಾಲಾಕ್ಷ ಜ.19ರಿಂದ 22ರವರೆಗೆ ಲಸಿಕೆ ಕಾರ‌್ಯಕ್ರಮ ನಡೆಯಲಿದೆ. ಮೊದಲ ದಿನ 61 ಟ್ರಾೃನಿಟ್ ಹಾಗೂ 13 ಮೊಬೈಲ್ ಸಹಿತ 1080 ಬೂತ್‌ಗಳಲ್ಲಿ ಹಾಗೂ ಇನ್ನುಳಿದ ಎರಡು ದಿನ ಮನೆಗೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು. ಈ ಕಾರ‌್ಯಕ್ರಮದ ಹಿನ್ನೆಲೆಯಲ್ಲಿ ಇಂದು ಜಿಲ್ಲಾದ್ಯಂತ 2500ಕ್ಕೂ ಹೆಚ್ಚು ಶಾಲೆಗಳು ಕಾರ‌್ಯನಿರ್ವಹಿಸುತ್ತಿವೆ ಎಂದರು.

    81 ಪ್ರಾ.ಆರೋಗ್ಯ ಕೇಂದ್ರಗಳು,11 ಸಮುದಾಯ ಕೇಂದ್ರಗಳು,5 ತಾಲೂಕು ಆಸ್ಪತ್ರೆ,5 ನಗರ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾಸ್ಪತ್ರೆಯಿಂದ 1,85380 ಡೋಸ್ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಐದು ವರ್ಷ ವಯೋಮಿತಿ ಯೊಳಗಿನ 151951 ಮಕ್ಕಳನ್ನು ಇದಕ್ಕಾಗಿ ಗುರುತಿಸಲಾಗಿದೆ. ನಗರ-35218 ಹಾಗೂ ಗ್ರಾಮೀಣ 116733 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ಆರ್‌ಸಿಎಚ್ ಅಧಿಕಾರಿ ಡ.ಕುಮಾರ ಸ್ವಾಮಿ ತಿಳಿಸಿದರು.

    ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ.ಜಗದೀಶ್, ಎಂಎಲ್‌ಸಿ ಜಯಮ್ಮ ಬಾಲರಾಜ್,ಜಿಪಂ ಅಧ್ಯಕ್ಷೆ ಜಿ.ಎಂ. ವಿಶಾಲಾಕ್ಷಿ ನಟರಾಜ್,ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಜಯಮ್ಮ, ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮೊದಲಾದ ಪ್ರಮುಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts