More

    ರಾಷ್ಟ್ರೀಯ ಪಲ್ಸ್ ಪೊಲಿಯೋ ಟಾಸ್ಕ್ ಫೋರ್ಸ ಸಮಿತಿ ಸಭೆ

    ವಿಜಯವಾಣಿ ಸುದ್ದಿಜಾಲ ಗದಗ

    ಜಿಲ್ಲೆಯಲ್ಲಿ  ಐದು ವರ್ಷದೊಳಗಿನ ಮಕ್ಕಳಿಗೆ ಮಾರ್ಚ 03 ರಂದು ಭೂತಮಟ್ಟದಲ್ಲಿ  ಪೋಲಿಯೋ ಲಸಿಕೆ ಹಾಕಲಾಗುವುದು ಹಾಗೂ ಮಾರ್ಚ 4 ರಿಂದ 6 ರವರೆಗೆ ಮೂರು ದಿನಗಳ ವರೆಗೆ  ಮನೆ-ಮನೆಗೆ ಭೇಟಿ ನೀಡಿ ಪೊಲಿಯೋ ಲಸಿಕೆ ಹಾಕಲಾಗುತ್ತಿದ್ದು ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.  

    ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಪಲ್ಸ ಪೋಲಿಯೋ ಅನುಷ್ಠಾನ ಕುರಿತು ಟಾಸ್ಕ ಫೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

    ಶಾಲಾ ಮಕ್ಕಳಿಗೆ ಪಲ್ಸ ಪೊಲಿಯೋ ಕಾರ್ಯಕ್ರಮದ ಕುರಿತು ಪ್ರಭಾತ ಪೇರಿ ಕೈಗೊಳ್ಳಬೇಕು. ಪಲ್ಸ ಪೋಲಿಯೋ ಬೂತಗಳಿಗಳಿರುವ ಅಂಗನವಾಡಿ ಕೇಂದ್ರಗಳನ್ನು ಪೋಲಿಯೋ ಬ್ಯಾನರಗಳಿಂದ ಸಿಂಗರಿಸಿ ಪಲ್ಸ ಪೋಲಿಯೋ 4 ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಕಟ್ಟಡ ನಿರ್ಮಾಣಕ್ಕೆ ಬಂದಂತಹ ಕಾರ್ಮಿಕರಿಗೆ ಪೋಲಿಯೋ ಕಾರ್ಯಕ್ರಮದ ಜಾಗೃತಿ ಮೂಡಿಸಬೇಕು ಎಂದರು.

    ಪಲ್ಸ ಪೊಲಿಯೊ ಕಾರ್ಯಕ್ರಮಕ್ಕೆ ಅವಶ್ಯವಿರುವ ಐಸ್ ಪ್ಯಾಕ್ ತಯಾರಿಸಲು ಮೂರು ದಿನಗಳ ಮೊದಲು ನಿರಂತರ ವಿದ್ಯುತ್ ಸರಬರಾಜು ಇರುವಂತೆ ನೋಡಿಕೊಳ್ಳಬೇಕು ಎಂದರು.

    ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಮೀನಾಕ್ಷಿ ಕೆ.ಎಸ್ ಅವರು ಮಾತಾಡಿ  ಪಲ್ಸ ಪೋಲಿಯೋ ಕಾರ್ಯಕ್ರಮದಲ್ಲಿ ಈ ಸುತ್ತಿನಲ್ಲಿ 129327 ಮಕ್ಕಳಿಗೆ ಲಸಿಕೆ ಗುರಿ ಹೊಂದಲಾಗಿದೆ. ಮಾರ್ಚ 3 ರಂದು  ಭೂತ ಮಟ್ಟದಲ್ಲಿ  ಐದು ವರ್ಷದೊಳಗಿನ  ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. ಮಾರ್ಚ 4 ರಿಂದ 6 ರವರೆಗೆ ಮೂರು ದಿನಗಳ ವರೆಗೆ ಲಸಿಕಾ ತಂಡದವರು ಮನೆ-ಮನೆಗೆ ಭೇಟಿ ನೀಡಿ ಲಸಿಕಾ ಕೇಂದ್ರಕ್ಕೆ ಬರದೇ ಉಳಿದಂತ ಮಕ್ಕಳನ್ನು ಹುಡುಕಿ ಅಂಥ ಮಕ್ಕಳಿಗೆ ಲಸಿಕೆ ನೀಡಿ ಆ ಮನೆಗಳಿಗೆ “ಪಿ” ಮಾರ್ಕ ಗುರುತನ್ನು ಹಾಕುವರೆಂದು ತಿಳಿಸಿದರು.

    ಗ್ರಾಮೀಣ ಭಾಗದಲ್ಲಿ 470 ಲಸಿಕಾ ಕೇಂದ್ರಗಳನ್ನು ಹಾಗೂ ನಗರ ಪ್ರದೇಶಗಳಲ್ಲಿ 235 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೆಲಸಕ್ಕೆ ಒಟ್ಟು 1410 ಜನ ಸಿಬ್ಬಂದಿಯವರನ್ನು ಲಸಿಕೆ ಹಾಕುವ ಕೆಲಸಕ್ಕೆ ಒಟ್ಟು 705 ತಂಡಗಳಲ್ಲಿ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕಾಗಿ ಮೇಲ್ವಿಚಾರಣೆ ಮಾಡಲು 146 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಅದರಂತೆ 30 ಟ್ರಾನ್ಜಿಟ್ ತಂಡಗಳು ಹಾಗೂ 07 ಸಂಚಾರಿ ತಂಡಗಳ ಮೂಲಕ ಪೋಲಿಯೋ ಹನಿ ಹಾಕುವ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.

    ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಪಲ್ಸ ಪೊಲಿಯೋ ಕುರಿತು ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.

    ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ನೀಲಗುಂದ, ಎಸ್.ಎಂ.ಓ ಡಾ.ಮುಕುಂದ ಗಲಗಲಿ, ಜಿಲ್ಲಾ ಶಸ್ತ್ರಚಿಕಿತ್ಸಕರ ಡಾ. ವಿ.ಸಿ.ಕರಿಗೌಡ್ರ, ತಾಲೂಕಾ ವೈದ್ಯಾಧಿಕಾರಿಗಳು, ಜಿಲ್ಲೆಯ ಎಲ್ಲಾ ಅನುಷ್ಠಾನಾಧಿಕಾರಿಗಳು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts