ನರೇಗಲ್ಲ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪಪಂ, ಗಜೇಂದ್ರಗಡ ತಾಲೂಕು ಜಾನಪದ ಪರಿಷತ್, ಬೀಚಿ ಬಳಗ, ಪೇಂಟರ್ ಸಂಘ, ಕನ್ನಡಪರ ಸಂಘಟನೆಯ ಆಶ್ರಯದಲ್ಲಿ ಶುಕ್ರವಾರ ನರೇಗಲ್ಲನಿಂದ ಜಕ್ಕಲಿವರೆಗೆ ಬೈಕ್ ರ‌್ಯಾಲಿ ನಡೆಸಿ ಕರ್ನಾಟಕ ಏಕಿಕರಣದ ಹೋರಾಟಗಾರ ದಿ. ಅಂದಾನಪ್ಪ ದೊಡ್ಡಮೇಟಿ ಅವರ ಸಮಾಧಿ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ನಿವೃತ್ತ ಶಿಕ್ಷಕ ಎಂ.ಎಸ್ ಧಡೇಸೂರಮಠ ಮಾತನಾಡಿ, ಕರ್ನಾಟಕದ ಜನತೆಗೆ ತೈಲ ವರ್ಣದ ಭುವನೇಶ್ವರಿ ಚಿತ್ರವನ್ನು ನೀಡಿದ ಕೀರ್ತಿ ಕರ್ನಾಟಕ ಏಕಿಕರಣದ ಹೋರಾಟಗಾರ ದಿ. ಅಂದಾನಪ್ಪ ದೊಡ್ಡಮೇಟಿ ಅವರಿಗೆ ಸಲ್ಲುತ್ತದೆ. ಅವರ ಕನಸಿನ ಕರ್ನಾಟಕ ಮಾತೆಯ ಪರಿಕಲ್ಪನೆಯ ಚಿತ್ರವನ್ನು ಗದುಗಿನ ಕಲಾ ಮಂದಿರದ ಕಲಾವಿದ ಸಿ.ಎನ್ ಪಾಟೀಲ ದೊಡ್ಡಮೇಟಿಯವರ ಮನದಾಳದಲ್ಲಿ ಅಡಗಿರುವ ಕಲ್ಪನೆಗೆ ರೂಪ ನೀಡಿದರು. ಕರ್ನಾಟಕ ಎಂಬ ನಾಮಕರಣ ಮಾಡಲು ದೊಡ್ಡಮೇಟಿ ಅವರ ಪಾತ್ರ ಬಹಳ ಮುಖ್ಯವಾಗಿತ್ತು. ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಜಾನಪದ ಪರಿಷತ್ ಗಜೇಂದ್ರಗಡ ತಾಲೂಕು ಅಧ್ಯಕ್ಷ ಎಂ.ಕೆ. ಬೇವಿನಕಟ್ಟಿ ಮಾತನಾಡಿ, ದಿ. ಅಂದಾನಪ್ಪ ದೊಡ್ಡಮೇಟಿ ಅವರ ಪರಿಕಲ್ಪನೆಯ ತೈಲ ವರ್ಣದ ಭುವನೇಶ್ವರಿ ಚಿತ್ರವನ್ನು ರಾಜ್ಯದ ಅಧಿಕೃತ ಲಾಂಛನವನ್ನಾಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಬಿ.ಬಿ. ಕುರಿ, ಕಳಕನಗೌಡ ಪೊಲೀಸ ಪಾಟೀಲ, ಚನ್ನಬಸವ ದೊಡ್ಡಮೇಟಿ, ಶೇಖಪ್ಪ ಜುಟ್ಲ, ಶೇಖಪ್ಪ ಕೆಂಗಾರ, ಈರಣ್ಣ ಗುಜಮಾಗಡಿ, ಮಹಮ್ಮದಗೌಸ್ ಹೊಸಮನಿ, ಮೈಲಾರಪ್ಪ ಚಳ್ಳಮರದ, ಸಂದೇಶ ದೊಡ್ಡಮೇಟಿ, ಹರ್ಷವರ್ಧನ ದೊಡ್ಡಮೇಟಿ, ಅಲ್ಲಾಭಕ್ಷಿ ನದಾಫ, ಬಸವರಾಜ ಮಾಳವಾಡ, ಜೆ.ಎ. ಪಾಟೀಲ, ಆರೀಫ್ ಮಿರ್ಜಾ, ಸಂಜೀವ ಗುಡಿಮನಿ ಇತರರಿದ್ದರು.