ಓದಿದ್ದು ತಲೆಗೆ ಹತ್ತುತ್ತಿಲ್ಲ ಎಂದು ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ಮೈಸೂರು: ಓದಿದ್ದು ತಲೆಗೆ ಹತ್ತುತ್ತಿಲ್ಲ, ಜೀವನದಲ್ಲಿ ಏನೂ ಸಾಧಿಸಲಾಗಲಿಲ್ಲ ಎಂದು ಮನನೊಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೈಸೂರಿನ ಬನ್ನಿಮಂಟಪದ ಕಾವೇರಿ ನಗರದಲ್ಲಿ ಘಟನೆ ನಡೆದಿದ್ದು, ಜೆ.ಎಸ್​.ಎಸ್​. ಕಾಲೇಜಿನ ಕಾಮರ್ಸ್​ ಕಾಲೇಜಿನ ವಿದ್ಯಾರ್ಥಿನಿ ಯಾಸ್ಮಿನ್​ ತಾಜ್​ (18) ಮೃತ ಯುವತಿ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಈಕೆ ವಿಡಿಯೋ ಮಾಡಿದ್ದು, ನಾನೊಬ್ಬಳು ಡಲ್​ ಸ್ಟೂಡೆಂಟ್​, ಸಿಂಗರ್​ ಅಥವಾ ಲಾಯರ್​ ಆಗುವ ಆಸೆ ಇತ್ತು. ಆದರೆ ದೇವರು ಆ ಆಸೆಯನ್ನು ಪೂರೈಲಿಲ್ಲ. ನನಗೆ ಆರೋಗ್ಯದ ಸಮಸ್ಯೆ ಇತ್ತು. ಆದ್ದರಿಂದ ಕಾಲೇಜಿಗೆ ಸರಿಯಾಗಿ ಹೋಗಿರಲಿಲ್ಲ. ಪ್ರಿಪರೇಟರಿ ಪರೀಕ್ಷೆಗೆ ಹಾಲ್​ ಟಿಕೆಟ್​ ಕೊಡಲಿಲ್ಲ. ಜೀವನದಲ್ಲಿ ಏನೂ ಸಾಧಿಸಲಿಲ್ಲ ಎಂದು ತಿಳಿಸಿ ನೀರಿನೊಂದಿಗೆ ಮಾತ್ರ ಬೆರೆಸಿ ಸೇವಿಸಿದ್ದಾಳೆ.

ಜತೆಗೆ ಬದುಕಿದ್ದಾಗ ನನ್ನನ್ನು ಯಾರೂ ಲೈಕ್​ ಮಾಡಿಲ್ಲ. ಸಾಯುವ ವಿಡಿಯೋನಾದ್ರೂ ಲೈಕ್​ ಮಾಡಿ, ಶೇರ್​ ಮಾಡಿ. ಯಾಸ್ಮಿನ್​ ಆತ್ಯಹತ್ಯೆ ಮಾಡಿಕೊಂಡಳು ಎಂದು ಪ್ರಪಂಚಕ್ಕೆ ತಿಳಿಸಿ ಎಂದು ಆಕೆ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾಳೆ. ಮೇಟಗಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

One Reply to “ಓದಿದ್ದು ತಲೆಗೆ ಹತ್ತುತ್ತಿಲ್ಲ ಎಂದು ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ”

  1. ಪ್ರಕೃತಿಯ ವಿಕೋಪದ ಮುಂದೆ ಯಾರೇನೂ ಮಾಡಲು ಸಾಧ್ಯವಿಲ್ಲ. ಹೇಗೆ ಸತ್ತರೂ ಒಂದು ದಿನ ಎಲ್ಲರೂ ಸಾಯಲೇಬೇಕಲ್ಲವೆ?

Comments are closed.