ಪಿಯುಸಿ ಫಲಿತಾಂಶ: ಪಂಚರ್​​​ ಹಾಕುವ ಹುಡುಗಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್​​

ಬಳ್ಳಾರಿ: ಪಂಚರ್​​ ಹಾಕುವ ಹುಡುಗಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ.
ಸೋಮವಾರ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೊಟ್ಟೂರಿನ ಇಂದು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ 600ಕ್ಕೆ 594 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಓದುವುದರ ಜತೆ-ಜತೆಗೆ ತಮ್ಮ ತಂದೆಯ ಪಂಚರ್​​​​​ ಶಾಪ್​​ನಲ್ಲಿ ಕೆಲಸ ಮಾಡಿಕೊಂಡು ಈ ಸಾಧನೆ ಮಾಡಿರುವು ಹೆಮ್ಮೆಯ ಸಂಗತಿಯಾಗಿದೆ.


ಬಡತನದಲ್ಲಿಯೇ ಬೆಳೆದು ಬಂದ ಕುಸುಮಾ ಇವತ್ತು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ಅದನ್ನು ಸತತ ಶ್ರಮದಿಂದ ಸಾಧಿಸಬಹುದು ಎಂದು ಕುಸುಮಾ ತೋರಿಸಿಕೊಟ್ಟಿದ್ದಾರೆ.
ಮೊದಲ ಸ್ಥಾನ ಬಂದ ಕುಸುಮಾ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನ ಬರುತ್ತೇನೆ ಎಂದು ನಾನು ಮೊದಲೇ ನಿರೀಕ್ಷೆ ಮಾಡಿದ್ದೆ. ಪರೀಕ್ಷೆಯಲ್ಲಿ ಎಲ್ಲ ವಿಷಯಗಳನ್ನು ಇಷ್ಟಪಟ್ಟು ಬರೆದಿದ್ದೆ. ಪರೀಕ್ಷೆಯ ಸಿದ್ಧತೆಗೆ ಯಾವುದೇ ವೇಳಾಪಟ್ಟಿ ಇರಲಿಲ್ಲ. ನನಗೆ ಯಾವ ಸಮಯದಲ್ಲಿ ಯಾವ ವಿಷಯ ಇಷ್ಟವಾಗುತ್ತಿತ್ತೋ ಆ ವಿಷಯ ಓದುತ್ತಿದ್ದೆ.


ಚಿಕ್ಕಂದಿನಿಂದಲೂ ತಂದೆಯ ಪಂಚರ್​​ ಶಾಪ್​​ನಲ್ಲಿ ಕೆಲಸ ಮಾಡಿ ಅವರಿಗೆ ಸಹಾಯ ಮಾಡುತ್ತಿದ್ದೆ. 10ನೇ ತರಗತಿಯಲ್ಲಿ ಶೇ. 92 ಅಂಕಗಳೊಂದಿಗೆ ಪಾಸಾಗಿದ್ದೆ. ಆಗ ಪಿಯುಸಿಯಲ್ಲಿ ವಿಜ್ಞಾನವನ್ನು ತೆಗೆದುಕೊಳ್ಳಬೇಕು ಎಂಬ ಆಸೆಯಿತ್ತು. ಆದರೆ, ಬಹಳ ಹಣದ ಖರ್ಚಾಗುತ್ತದೆ ಎಂಬ ಕಾರಣಕ್ಕೆ ಕಲಾ ವಿಭಾಗ ತೆಗದುಕೊಂಡೆ ಎಂದು ಕುಸುಮಾ ತಿಳಿಸಿದ್ದಾರೆ.
ಕಳೆದೆರಡು ವರುಷಗಳ ಹಿಂದೆ ಬಾಳೆಹಣ್ಣು ಮಾರುವ ವ್ಯಾಪಾರಿ ಮಗಳು ದ್ವಿತೀಯ ಪಿಯುಸಿಯಲ್ಲಿ ಟಾಪರ್ ಆಗಿದ್ದಳು.

One Reply to “ಪಿಯುಸಿ ಫಲಿತಾಂಶ: ಪಂಚರ್​​​ ಹಾಕುವ ಹುಡುಗಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್​​”

Comments are closed.