More

  ಪಿಯು ಪರೀಕ್ಷೆಯಲ್ಲಿ ಫೇಲ್:​ ನೇಣಿಗೆ ಶರಣಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಆತ್ಮಹತ್ಯೆ ಯತ್ನ

  ದಾವಣಗೆರೆ/ಬಳ್ಳಾರಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ದಾವಣಗೆರೆ ಮೂಲದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದು, ಬಳ್ಳಾರಿಯಲ್ಲಿ ವಿದ್ಯಾರ್ಥಿನಿಯರಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.

  ಇದನ್ನೂ ಓದಿ: ಕಲಾ ವಿಭಾಗದಲ್ಲಿ ರೈತನ ಮಗ ಕರಿಗೌಡ ದಾಸನಗೌಡ್ರ ರಾಜ್ಯಕ್ಕೆ ಟಾಪರ್​

  ಜಯರಾಮ್‌ (18) ಮೃತಪಟ್ಟ ವಿದ್ಯಾರ್ಥಿ. ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ನೇಣಿಗೆ ಶರಣಾಗಿದ್ದಾನೆ. ಹರಿಹರದ ಪಕ್ಕೀರಸ್ವಾಮಿ ಬಳಿಯ ಮನೆಯೊಂದರಲ್ಲಿ ಘಟನೆ ನಡೆದಿದೆ. ಎಂಕೆಇಟಿ ಪಿಯು ಕಾಲೇಜಿನ ಸೈನ್ಸ್‌ ವಿದ್ಯಾರ್ಥಿಯಾಗಿದ್ದ ಜಯರಾಮ್​​, ಭೌತಶಾಸ್ತ್ರ ವಿಭಾಗದಲ್ಲಿ ಫೇಲ್​ ಆಗಿದ್ದರಿಂದ ಮನನೊಂದು ತಪ್ಪು ನಿರ್ಧಾರದಿಂದ ಜೀವ ಕಳೆದುಕೊಂಡಿದ್ದಾನೆ.

  ಜಯರಾಮ್,​ ಕೊಟ್ರೇಶ್‌-ಗೀತಾ ದಂಪತಿಯ ಪುತ್ರ. ತಂದೆ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದಾರೆ. ಇದೀಗ ಮಗನನ್ನು ಕಳೆದುಕೊಂಡು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

  ಇದನ್ನೂ ಓದಿ: ದ್ವಿತೀಯ ಪಿಯು ಸೈನ್ಸ್​ ಪ್ರಥಮ ರ‌್ಯಾಂಕ್ ವಿಜೇತೆಗೆ ಇಂಜಿನಿಯರ್ ಕನಸು

  ವಿದ್ಯಾರ್ಥಿನಿಯರ ಆತ್ಮಹತ್ಯೆ ಯತ್ನ
  ಬಳ್ಳಾರಿಯ ಹೊಸಪೇಟೆಯಲ್ಲಿ ಇಬ್ಬರು ಪಿಯು ವಿಜ್ಞಾನ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರೈಲ್ವೆ ಹಳಿಯ ಮೇಲೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಶ್ರೇಯ ಹಾಗೂ ರೂಪಾ ಎಂಬುವರನ್ನು ನಗರದ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೇಯಾಳ ತಂದೆಗೆ ಕರೊನಾ ಪಾಸಿಟಿವ್ ಇದ್ದು ಕ್ವಾರಂಟೈನ್ ನಲ್ಲಿದ್ದಾರೆ. (ದಿಗ್ವಿಜಯ ನ್ಯೂಸ್​)

  ಕರ್ನಾಟಕದ ಪಿಯುಸಿ ಟಾಪರ್ಸ್​ ಲಿಸ್ಟ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts