ದೇವದುರ್ಗ: ಗಬ್ಬೂರು ಗ್ರಾಮದ 4ನೇ ವಾರ್ಡ್‌ನ ಎಸ್ಸಿ ಕಾಲನಿಯಲ್ಲಿ ಸಾರ್ವಜನಿಕ ಶೌಚಗೃಹ ನೆಲಸಮ ಮಾಡಿದ್ದು, ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ದಲಿತಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಮನವಿ ಸಲ್ಲಿಸಿತು.
ಗ್ರಾಮದ 4ನೇ ವಾರ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ವಾಸವಾಗಿದ್ದು, 20 ವರ್ಷಗಳ ಹಿಂದೆ ಸಾರ್ವಜನಿಕ ಶೌಚಗೃಹ ನಿರ್ಮಿಸಲಾಗಿತ್ತು. ಆದರೆ, ಶೇಖ್ ಮಹಿಬೂಬ್ ಪಾಷಾ ಎನ್ನುವವರು ಜಾಗ ಒತ್ತುವರಿ ಮಾಡಿಕೊಂಡು ಶೌಚಗೃಹ ನೆಲಸಮ ಮಾಡಿದ್ದಾರೆ. ಇದರಿಂದ ಮಹಿಳೆಯರಿಗೆ ತೀವ್ರ ಸಮಸ್ಯೆಯಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ. ನನ್ನ ಜಾಗವೆಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಗ್ರಾಪಂಗೆ ದೂರು ನೀಡಿದರೆ ಪಿಡಿಒ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಕೂಡಲೇ ಸಾರ್ವಜನಿಕ ಶೌಚಗೃಹ ಕೆಡವಿ ಜಾಗ ಅತಿಕ್ರಮ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಹೊಸದಾಗಿ ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಮಹಿಳೆಯರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಬಸವರಾಜ ಸೂರಿ, ಭೀಮೇಶಪ್ಪ ಭಂಡಾರಿ ಗುಂಡ್ರಾಳ, ಬಸವರಾಜ ಜಗ್ಲಿ, ರಮೇಶ ಇಡಚೇರಿ, ಹುಲಿಗೇಶ ಮುದಗಲ್, ರಾಜಾಹುಲಿ ಸಿಂಗ್ರಿ ಇದ್ದರು.