ನರಗುಂದ: ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯಡಿ ತಾಲೂಕಿನ ಶಿರೋಳ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಿಂದ ಮಂಗಳವಾರ ಪೋಷಣ ಪಕ್ವಾಡ ಕಾರ್ಯಕ್ರಮ ಜರುಗಿತು.
ಪೋಷಣ ಅಭಿಯಾನ ಕಾರ್ಯಕ್ರಮ ಸಂಯೋಜಕ ಮಂಜುನಾಥ ಗುಗ್ಗರಿ ಮಾತನಾಡಿ, ಪೋಷಣ ಪಕ್ವಾಡ 15 ದಿನಗಳ ಕಾಲ ಜರುಗುವ ಕಾರ್ಯಕ್ರಮವಾಗಿದ್ದು, ಈ ವರ್ಷ ವಿಶೇಷವಾಗಿ ಮೊದಲ 1000 ದಿನಗಳನ್ನು ಆರೈಕೆ, ಮಕ್ಕಳಲ್ಲಿ ಆರೋಗ್ಯಕರ ಜೀವನ ಶೈಲಿ ಹಾಗೂ ಪೋಷಣ ಟ್ರ್ಯಾಕರ್ ಆಪ್ಗಳಲ್ಲಿ ಫಲಾನುಭವಿಗಳ ಸ್ವಯಂ ನೋಂದಣಿ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಅಂಗನವಾಡಿ ಮೇಲ್ವಿಚಾರಕಿ ಪರಿಮಳ ಹೂಗಾರ ಮಾತನಾಡಿ, ಅಂಗನವಾಡಿಗಳ ಮೂಲಕ ಸುಸ್ಥಿರ ಆಹಾರ ವ್ಯವಸ್ಥೆ, ರಕ್ತಹೀನತೆ ಮತ್ತು ಆರೋಗ್ಯಕರ ಜೀವನಶೈಲಿ ಬಗ್ಗೆ ವಿಶೇಷ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಶಿರೋಳ ಗ್ರಾಪಂ ಸದಸ್ಯೆ ಕೌಸರಭಾನು ಮುಲ್ಲಾ ಕಾರ್ಯಕ್ರಮ ಉದ್ಘಾಟಿಸಿದರು. ಪಿಡಿಒ ವೈ.ಬಿ. ಸಂಕನಗೌಡ್ರ, ಅಂಗನವಾಡಿ ಕಾರ್ಯಕರ್ತೆಯರಾದ ಎಸ್.ಜೆ. ಬಾಗಲಕೋಟ, ಎಸ್.ವಿ. ಜಿಗಳೂರ, ಎಸ್.ವಿ. ಪಾಟೀಲ, ಎಸ್.ಜಿ. ಕುಪ್ಪಸ್ತ, ವಿ.ಎಸ್. ಹಂಚಿನಮನಿ, ಎಂ.ವೈ. ಬನ್ನಿಗಿಡದ, ಎಸ್.ವಿ. ಕುಪ್ಪಸ್ತ, ಎನ್.ಎಂ. ಕಣಕೇರಿ, ಎಸ್.ಎಂ. ಕಿತ್ತಲಿ, ಐ.ಎಸ್. ಮಂಟೂರಮಠ, ವಿ.ಎಸ್. ಗಿರಿಯಪ್ಪಗೌಡ್ರ, ಜಿ.ಎಲ್. ಮರ್ಚಣ್ಣವರ, ಇತರರಿದ್ದರು.
