Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಪಿಯು ಉಪನ್ಯಾಸಕರ ನೇಮಕ ಎಂದು?

Friday, 22.06.2018, 3:03 AM       No Comments

ಪಿಯು ಕಾಲೇಜು ಉಪನ್ಯಾಸಕರ ಹುದ್ದೆ ನೇಮಕಾತಿಗಾಗಿ ಮೂರು ಸಲ ಅಧಿಸೂಚನೆ ಹೊರಡಿಸಿ, ಒಂದು ಬಾರಿ ಪರೀಕ್ಷೆ ನಡೆಸುವ ತೀರ್ವನವನ್ನೂ ತೆಗೆದುಕೊಂಡಿದ್ದ ಕೆಇಎ, ಏಕಾಏಕಿ ನಿರ್ಧಾರ ರದ್ದುಪಡಿಸಿದ್ದರಿಂದಾಗಿ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಇಂದಲ್ಲ ನಾಳೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಬಹುದೆಂಬ ಸಣ್ಣ ನಿರೀಕ್ಷೆ ಹೊತ್ತು 3 ವರ್ಷದಿಂದ ದಿನದೂಡುತ್ತಿರುವ ಇವರ ನೋವಿಗೆ ವಿಜಯವಾಣಿ ‘ಸಹಾಯವಾಣಿ’ ದನಿಯಾಗಿದೆ.

ಹುಬ್ಬಳ್ಳಿ: ಪಿಯು ಕಾಲೇಜುಗಳ ಉಪನ್ಯಾಸಕರ ಹುದ್ದೆ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ಯಾವಾಗ? ಮೂರು ಸಲ ಅಧಿಸೂಚನೆ ಹೊರಡಿಸಿದರೂ ಪರೀಕ್ಷೆ ನಡೆಸಲು ಇನ್ನೂ ಹೆಣಗಾಡುತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಮುಂದೆ ಉದ್ಯೋಗಾಕಾಂಕ್ಷಿಗಳು ಇಟ್ಟಿರುವ ಪ್ರಶ್ನೆ ಇದು.

ಉಪನ್ಯಾಸಕರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ‘ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿಪೂರ್ವ ಶಿಕ್ಷಣ) (ನೇಮಕಾತಿ) ನಿಯಮಗಳು 2013ರ ಅನ್ವಯ ಅರ್ಹ ಅಭ್ಯರ್ಥಿಗಳಿಂದ 2015ರ ಮೇ 8ರಂದು ಆನ್​ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಆಯ್ಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಲಾಯಿತು.

2015ರಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಶುಲ್ಕ ತುಂಬಿರದಿದ್ದರೆ ಭರಿಸಬೇಕೆಂದು ಸೂಚಿಸಿ 2016ರಲ್ಲಿ ಮತ್ತೆ ಅಧಿಸೂಚನೆ ಹೊರಡಿಸಲಾಯಿತು. ಅರ್ಜಿಯಲ್ಲಿ ತಪ್ಪಾಗಿದ್ದರೆ ತಿದ್ದುಪಡಿ ಮಾಡಲು ಅವಕಾಶ ಕೊಟ್ಟಿತು. ಆಗ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿಲ್ಲ. 2017ರ ಫೆ 28ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಉಪನ್ಯಾಸಕರ ಹುದ್ದೆ ಭರ್ತಿಗೆ ಆನ್​ಲೈನ್ ಮೂಲಕ ಮತ್ತೆ ಅರ್ಜಿ ಆಹ್ವಾನಿಸಿತು. ಮೊದಲು 1130 ಹುದ್ದೆಗಳಿದ್ದು ನಂತರ 1203 ಖಾಲಿ ಹುದ್ದೆಗಳನ್ನು ತೋರಿಸಲಾಗಿತ್ತು. 2015ರಲ್ಲಿ ಅರ್ಜಿ ಹಾಕಿದವರು ಮತ್ತೆ ಸಲ್ಲಿಸುವಂತಿಲ್ಲ ಎಂದು ಸೂಚಿಸಲಾಗಿತ್ತು. ಆದರೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಗೋಜಿಗೆ ಹೋಗಿರಲಿಲ್ಲ.

ಕೆಇಎ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿ ಸಂಬಂಧ 2018ರ ಫೆ 23, 24, 25, 26ರಂದು ಪರೀಕ್ಷೆ ನಡೆಸಲು ತೀರ್ವನಿಸಿತು. ಇದರಿಂದ ಸಂತಸಗೊಂಡ ಉದ್ಯೋಗಾಕಾಂಕ್ಷಿಗಳು ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಂಡಿದ್ದರು. ಮತ್ತೆ ಇದ್ದಕ್ಕಿದ್ದಂತೆ ಪರೀಕ್ಷೆ ಮುಂದೂಡಿರುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ಪ್ರಕಟಿಸುವ ಭರವಸೆಯನ್ನು ಕೆಇಎ ನೀಡಿತು. ಕರ್ನಾಟಕ ವಿಧಾನಸಭೆ ಚುನಾವಣೆ ನಿಮಿತ್ತ ಸ್ಪರ್ಧಾತ್ಮಕ ಪರೀಕ್ಷೆ ಮುಂದೂಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು. ಆದರೆ, ಚುನಾವಣೆ ಮುಗಿದು ಒಂದೂವರೆ ತಿಂಗಳಾದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇನ್ನೂ ಪರೀಕ್ಷೆ ನಡೆಸುವ ಉಮೇದಿ ತೋರುತ್ತಿಲ್ಲ.

ವಯೋಮಿತಿ ಮೀರುವ ಆತಂಕ

ಪರೀಕ್ಷೆ ನಡೆಸುವಂತೆ ಅಭ್ಯರ್ಥಿಗಳು ಕೆಇಎ ಕದ ತಟ್ಟುತ್ತಿದ್ದಾರೆ. ಇನ್ನೂ ಕಾಯಿರಿ ಎಂಬ ಉತ್ತರ ಮಾತ್ರ ಸಿಗುತ್ತಿದೆ. ಹೀಗೇ ಆದರೆ ವಯೋಮಿತಿ ಮೀರುವ ಆತಂಕ ಅಭ್ಯರ್ಥಿಗಳನ್ನು ಕಾಡುತ್ತಿದೆ. ಆದಷ್ಟು ಬೇಗ ಪರೀಕ್ಷೆ ನಡೆಸಿ ಆತಂಕ ನೀಗಿಸುವಂತೆ ನೊಂದವರು ಕೋರಿದ್ದಾರೆ.

Leave a Reply

Your email address will not be published. Required fields are marked *

Back To Top