ಪಿಯು ಪರೀಕ್ಷೆಯಲ್ಲಿ ಏಳರಿಂದ ಐದನೇ ಸ್ಥಾನಕ್ಕೆ ಜಿಗಿದ ಕಾಫಿನಾಡು

ಚಿಕ್ಕಮಗಳೂರು: ದ್ವಿತಿಯ ಪಿಯುಸಿ ಫಲಿತಾಂಶದಲ್ಲಿ ಎರಡು ಹಂತ ಮೇಲಕ್ಕೆ ಜಿಗಿದಿರುವ ಜಿಲ್ಲೆ ಪ್ರತಿಶತ ಶೇ.70.37ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ ಐದನೇ ಗಳಿಸಿದೆ.

ಕಳೆದ ವರ್ಷ ಶೇ.67.68 ಫಲಿತಾಂಶ ಪಡೆದು ಏಳನೇ ಸ್ಥಾನದಲ್ಲಿದ್ದ ಜಿಲ್ಲೆ, ಈ ಬಾರಿ ಐದನೇ ಸ್ಥಾನಕ್ಕೆ ಏರಿರುವುದಕ್ಕೆ ಉಪನ್ಯಾಸಕರು ಹಾಗೂ ಪಾಲಕರಿಗೆ ಖುಷಿ ತಂದಿದೆ. ಈ ವರ್ಷವೂ ಗ್ರಾಮೀಣ ಮತ್ತು ನಗರ ಭಾಗದ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ ನಗರಕ್ಕಿಂತ ಗ್ರಾಮಿಣ ಭಾಗದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶೇ.73.09 ವಿದ್ಯಾರ್ಥಿಗಳು ತೇರ್ಗೆಡೆಯಾಗಿ ಮೊದಲ ಸ್ಥಾನದಲ್ಲಿದ್ದರೆ, ವಿಜ್ಞಾನ ಶೇ.71.67 ಹಾಗೂ ಕಲಾ ವಿಭಾಗದಲ್ಲಿ ಶೇ.66.25 ಉತ್ತೀರ್ಣರಾಗಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಗ್ರಾಮೀಣ ಭಾಗದ ಶೇ.74.06, ನಗರ ಭಾಗದ ಶೇ.69.26 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 9,532 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 6,708 ಮಂದಿ ಪಾಸಾಗಿದ್ದಾರೆ. 5,046 ಬಾಲಕಿಯರಲ್ಲಿ 3,796 ಉತ್ತೀರ್ಣರಾದರೆ, 4,486 ಬಾಲಕರ ಪೈಕಿ 2,912 ಬಾಲಕರು ಪಾಸಾಗಿದ್ದಾರೆ. ಪುನರಾವರ್ತಿತ 895 ವಿದ್ಯಾರ್ಥಿಗಳಲ್ಲಿ 294 ಮತ್ತು ಖಾಸಗಿಯಾಗಿ ಪರೀಕ್ಷೆ ಬರೆದಿದ್ದ 483 ಅಭ್ಯರ್ಥಿಗಳ ಪೈಕಿ 183 ಮಂದಿ ಪಾಸಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 3,765 ವಿದ್ಯಾರ್ಥಿಗಳಲ್ಲಿ 2,752, ವಿಜ್ಞಾನ ವಿಭಾಗದ 2,499ರಲ್ಲಿ 1,791 ಹಾಗೂ ಕಲಾ ವಿಭಾಗದ 3,268 ವಿದ್ಯಾರ್ಥಿಗಳ ಪೈಕಿ 2,165 ಮಂದಿ ತೇರ್ಗಡೆ ಹೊಂದಿದ್ದಾರೆ. ಕನ್ನಡ ಮಾಧ್ಯಮಕ್ಕಿಂತ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದವರೇ ಹೆಚ್ಚಾಗಿ ಉತ್ತೀರ್ಣರಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ 4,861ರಲ್ಲಿ 3594(ಶೇ.66.90) ಹಾಗೂ ಕನ್ನಡ ಮಾಧ್ಯಮದಲ್ಲಿ 4,671ರಲ್ಲಿ 3,114 ವಿದ್ಯಾರ್ಥಿಗಳು (ಶೇ.55.08) ಉತ್ತೀರ್ಣರಾಗಿದ್ದಾರೆ.

Leave a Reply

Your email address will not be published. Required fields are marked *