ಇಒಎಸ್​-01 ಉಪಗ್ರಹ ಉಡಾವಣೆ ಇಂದು

ಚೆನ್ನೈ: ರಾಡಾರ್ ಇಮೇಜಿಂಗ್ ಉಪಗ್ರಹ ಇಒಎಸ್​-01 ಸೇರಿ 10 ಉಪಗ್ರಹಗಳನ್ನು ಇಂದು ಉಡಾವಣೆ ಮಾಡುವುದಕ್ಕೆ ಇಸ್ರೋ ಸಜ್ಜಾಗಿದೆ. ಈಗಾಗಲೇ ಇದಕ್ಕೆ ಕೌಂಟ್​ ಡೌನ್ ಶುರುವಾಗಿದ್ದು, ಶ್ರೀಹರಿ ಕೋಟಾದ ಮೊದಲನೇ ಲಾಂಚ್​ ಪ್ಯಾಡ್​ನಿಂದ ಅಪರಾಹ್ನ 3.02 ಗಂಟೆಗೆ ಉಡಾವಣೆಯಾಗಲಿದೆ. ಇಒಎಸ್​-01 ಉಪಗ್ರಹ ಈ ಮೊದಲು ರಿಯಾಸ್ಯಾಟ್​-2ಬಿಆರ್​2 ಆಗಿತ್ತು. ಅದರಲ್ಲಿ ಸಿಂಥೆಟಿಕ್​ ಅಪರ್ಚರ್​ ರಾಡಾರ್ ಇದ್ದು, ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಫೋಟೋ ತೆಗೆಯುವ ಸಾಮರ್ಥ್ಯಹೊಂದಿದೆ. ಹಗಲು ಮತ್ತು ರಾತ್ರಿ ನಿಗಾ ಇರಿಸುವ ದೃಷ್ಟಿಯಿಂದ ಈ ಉಪಗ್ರಹ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. … Continue reading ಇಒಎಸ್​-01 ಉಪಗ್ರಹ ಉಡಾವಣೆ ಇಂದು