ಪಿಎಸ್​ಐ ಪರೀಕ್ಷೆ ಪತ್ರಿಕೆ ಲೀಕ್​ಗೆ ಯತ್ನಿಸಿದವರ ಬಂಧಿಸಿದ ಸಿಸಿಬಿ ಪೊಲೀಸರು

ತುಮಕೂರು: ಪಿಎಸ್​ಐ ಪರೀಕ್ಷೆ ಪತ್ರಿಕೆಗಾಗಿ ಹಣದೊಂದಿಗೆ ಆಗಮಿಸಿದ್ದ ಮೂವರು ಏಜೆಂಟರು ಸೇರಿ ಮತ್ತು 10 ಮಂದಿ ಪಿಎಸ್​ಐ ಅಭ್ಯರ್ಥಿಗಳನ್ನು ಸಿಸಿಬಿ ಪೊಲೀಸರು ಗುಬ್ಬಿ ತಾಲೂಕಿನ ಬೆಳ್ಳಾವಿಯಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ.

ಸಿಸಿಬಿ ಎಸಿಪಿ ವೇಣುಗೋಪಾಲ್​ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಅಭ್ಯರ್ಥಿಗಳನ್ನು ಮತ್ತು ಪೇಪರ್​ ಲೀಕ್​ ಏಜೆಂಟರನ್ನು ಬಂಧಿಸಿದೆ. ಬಂಧಿತರಲ್ಲಿ ಬಸವರಾಜ್​, ಹೊಳಿಯಪ್ಪ, ನಾಗರಾಜ್​ ಎಂಬುವರು ಏಜೆಂಟರಾಗಿದ್ದು ಪೊಲೀಸ್​ ಕಾನ್ಸ್​ಟೆಬಲ್​ ಪರೀಕ್ಷೆ ಪೇಪರ್​ ಲೀಕ್​ ಆಗುವುದರಲ್ಲೂ ಇವರ ಕೈವಾಡವಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ.

ಬೆಳಗಾವಿಯಲ್ಲೂ ಅರೆಸ್ಟ್​

ಪಿಎಸ್​ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಅನುಮಾನದ ಮೇರೆಗೆ ಗೋಕಾಕ್​ ತಾಲೂಕಿನ ಕಳ್ಳಗುದ್ದಿ ಗ್ರಾಮದಲ್ಲಿ ಎಂಟು ಮಂದಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಕರೆದುಕೊಂಡು ಬಂದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.(ದಿಗ್ವಿಜಯ ನ್ಯೂಸ್​)