More

    ಹೋಟೆಲ್​ ಉದ್ಯಮ ದಿಕ್ಕು ಬದಲಿಸಿದ ಪಿ.ಆರ್‌.ಎಸ್. ಒಬೆರಾಯ್ ವಿಧಿವಶ

    ನವದೆಹಲಿ: ಒಬೆರಾಯ್ ಗ್ರೂಪ್‌ನ ಅಧ್ಯಕ್ಷ ಪಿ.ಆರ್‌.ಎಸ್.ಒಬೆರಾಯ್ ಮಂಗಳವಾರ ಬೆಳಗ್ಗೆ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಭಾರತದಲ್ಲಿ ಹೋಟೆಲ್ ವ್ಯವಹಾರದ ದಿಕ್ಕು ಬದಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

    ಇದನ್ನೂ ಓದಿ: ಕೆಲಸದಿಂದ ತೆಗದಿದ್ದಕ್ಕೆ ಬೆಂಗಳೂರು ಕಂಪನಿಯೊಂದಕ್ಕೆ ಬಾಂಬ್​ ಬೆದರಿಕೆ ಹಾಕಿದ ಯುವತಿ
    ನಮ್ಮ ಪ್ರೀತಿಯ ನಾಯಕ ಪಿಆರ್‌ಎಸ್ ನಿಧನದ ಬಗ್ಗೆ ತಿಳಿಸಲು ತೀವ್ರ ದುಃಖವಿದೆ. ಅವರ ನಿಧನವು ಒಬೆರಾಯ್ ಗ್ರೂಪ್ ಮತ್ತು ಸಾಗರೋತ್ತರ ಹೋಟೆಲ್​ ಉದ್ಯಮಕ್ಕೆ ನಷ್ಟವಾಗಿದೆ. ಅವರ ಸಮರ್ಪಣಾ ಮನೋಭಾವದಿಂದ ಹೋಟೆಲ್​ ಉದ್ಯಮ ದೇಶ ವಿದೇಶಗಳಿಗೆ ವಿಸ್ತರಿಸಿದೆ ಎಂದು ಅವರ ಪುತ್ರರಾದ ವಿಕ್ರಮ್ ಮತ್ತು ಅರ್ಜುನ್ ಒಬೆರಾಯ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಪಿಆರ್‌ಎಸ್ ಒಬೆರಾಯ್ ಅವರ ಅಂತ್ಯಕ್ರಿಯೆಯು ಮಂಗಳವಾರ ಸಂಜೆ 4 ಗಂಟೆಗೆ ಕಪಶೇರಾದ ಒಬೆರಾಯ್ ಫಾರ್ಮ್‌ನಲ್ಲಿರುವ ಭಗವಂತಿ ಒಬೆರಾಯ್ ಚಾರಿಟೇಬಲ್ ಟ್ರಸ್ಟ್‌ನಲ್ಲಿ ನಡೆಯಲಿದೆ.

    ಪಿಆರ್​ಎಸ್​ ಒಬೆರಾಯ್ ಯಾರು?:1929 ರಲ್ಲಿ ನವದೆಹಲಿಯಲ್ಲಿ ಜನಿಸಿದ ಪೃಥ್ವಿ ರಾಜ್ ಸಿಂಗ್ ಒಬೆರಾಯ್ ದಿ ಒಬೆರಾಯ್ ಗ್ರೂಪ್‌ನ ಪ್ರಮುಖ ಕಂಪನಿಯಾದ ಇಐಎಚ್​ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು. ಅವರು ಇದರ ಪ್ರಮುಖ ಷೇರುದಾರರಾದ ಒಬೆರಾಯ್ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರೂ ಆಗಿದ್ದರು. ಅವರು ದಿ.ರಾವ್ ಬಹದ್ದೂರ್ ಅವರ ಪುತ್ರ. ಭಾರತ, ಯುಕೆ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಅಧ್ಯಯನ ಮಾಡಿದ್ದ ಅವರು ಒಬೆರಾಯ್ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಅಭಿವೃದ್ಧಿಯ ಪ್ರವರ್ತಕರಲ್ಲಿ ಪ್ರಮುಖ ಪಾತ್ರ ವಹಿಸಿದ್ದು.

    ಅಮೆರಿಕಾ – ಚೀನಾ ಪರಿಸ್ಥಿತಿ ನಿಭಾಯಿಸದಿದ್ದರೆ ಸಂಘರ್ಷ ಖಚಿತ ಎಂದಿದ್ದೇಕೆ ಸುಲ್ಲಿವಾನ್

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts