ಬೆಂಗಳೂರು: ಅಪ್ರಾಪ್ತ ಅಣ್ಣನಿಂದ ಸಹೋದರಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ. ಈ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಅಪ್ರಾಪ್ತನನ್ನು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.
ಅಪ್ರಾಪ್ತ ಹಾಗೂ ಸಂತ್ರಸ್ತೆ ಅವಳಿ ಸಹೋದರ-ಸಹೋದರಿಯಾಗಿದ್ದಾರೆ. ಬಾಗಲಗುಂಟೆಯಲ್ಲಿ ಪಾಲಕರೊಂದಿಗೆ ವಾಸವಿದ್ದರು. ಮನೆಯಲ್ಲಿ ಪಾಲಕರು ಇಲ್ಲದಿರುವಾಗ ಇಬ್ಬರು ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದರು ಎಂದು ಹೇಳಲಾಗಿದೆ. ಅದರಿಂದ ಪ್ರಚೋದನೆಗೊಂಡು ಇಬ್ಬರೂ ನಿರಂತರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ಅದರಿಂದಾಗಿ ಬಾಲಕಿ ಮೂರು ತಿಂಗಳು ಗರ್ಭಿಣಿಯಾಗಿದ್ದಾಳೆ.
ಬಾಲಕಿಯಲ್ಲಿ ದೈಹಿಕ ಬದಲಾವಣೆ ಕಂಡುಬಂದಾಗ ಪಾಲಕರು ಆಕೆಯನ್ನು ಖಾಸಗಿ ಅಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಬಾಲಕಿ ಮೂರು ತಿಂಗಳು ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ತಕ್ಷಣ ವೈದ್ಯರು, ಬಾಗಲಗುಂಟೆ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಂತ್ರಸ್ತೆ ವಿಚಾರಣೆ ನಡೆಸಿ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಲಾಗಿದೆ.
ಸದ್ಯ ಸಂತ್ರಸ್ತೆಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ರೇವ್ ಪಾರ್ಟಿ ಕೇಸ್: ಫಾರ್ಮ್ ಹೌಸ್ ಒಳಗೆ ನಡೆದಿದ್ದೇನು? ಸ್ಫೋಟಕ ಹೇಳಿಕೆ ನೀಡಿದ ನಟಿ ಆಶಿ ರಾಯ್
ಸ್ವರ್ಗದಲ್ಲಿರುವ ತನ್ನ ಅಜ್ಜಿಗಾಗಿ ಆಕಾಶಕ್ಕೆ ಏಣಿ ಹಾಕಿದ ಮೊಮ್ಮಗ! ವಿಡಿಯೋ ವೈರಲ್