More

  ಸರ್ಕಾರಿ ಶಾಲೆ ಮಕ್ಕಳಿಗೆ ಅಗತ್ಯ ಸೌಕರ್ಯ ಕಲ್ಪಿಸಿ

  ಚಿಂಚೋಳಿ: ಸರ್ಕಾರಿ ಶಾಲೆಗೆ ಬಡ ಮಕ್ಕಳು ಬರುತ್ತಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ತಾಕೀತು ಮಾಡಿದರು.

  ದೇಗಲಮಡಿ ಸರ್ಕಾರಿ ಶಾಸಕರ ಮಾದರಿ ಪ್ರಾಥಮಿಕ ಶಾಲೆಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು, ಕಿಟಕಿಗಳು ಮುರಿದಿದ್ದು, ಕೂಡಲೇ ದುರಸ್ತಿ ಮಾಡಿ. ಶಾಲೆಯ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಿ. ಮಕ್ಕಳ ಶೈಕ್ಷಣಿಕ ಮಟ್ಟ ಹೆಚ್ಚಿಸಲು ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಎಚ್ಚರಿಕೆ ನೀಡಿದರು.

  ಬಳಿಕ ಮಕ್ಕಳೊಂದಿಗೆ ಮಧ್ಯಾಹ್ನ ಊಟ ಸವಿದು, ಆಹಾರದ ಗುಣಮಟ್ಟ ಸರಿಪಡಿಸಿಕೊಳ್ಳಿ. ಮಕ್ಕಳಿಗೆ ಪೌಷ್ಟಿಕ ಆಹಾರಗಳಾದ ತರಕಾರಿ ಪದಾರ್ಥ, ಮೊಟ್ಟೆ ವಿತರಿಸಿ ಎಂದು ಸೂಚನೆ ನೀಡಿದರು.

  ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಯಂಗನೂರ, ವಲಯ ಸಂಪನ್ಮೂಲ ವ್ಯಕ್ತಿ ಶಶಿಕಲಾ, ಮುಖ್ಯಗುರು ರಾಜಕುಮಾರ ಕವಳೆ, ಶಿಕ್ಷಕರಾದ ಮೀನಾಕ್ಷಿ ನಾಗಶೆಟ್ಟಿ, ಬಸವರಾಜ, ಜ್ಯೋತಿಲಕ್ಷಿö್ಮÃ, ಮಹಾದೇವಿ, ಅಶೋಕ, ನಾಗರೆಡ್ಡಿ, ಭಾನುಮತಿ, ಗುಂಡಮ್ಮ, ಶಶಿಕಲಾ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts