ರಬಕವಿ-ಬನಹಟ್ಟಿ: ವೃತ್ತಿ ಪರ ನೇಕಾರರಿಗೆ ಸರ್ಕಾರ ಮೂಲ ಸೌಕರ್ಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಒತ್ತಾಯಿಸಿದರು.
ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ತಹಸೀಲ್ದಾರ್ ಗಿರೀಶ ಸಾಧ್ವಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೋವಿಡ್ ಮತ್ತು ಜಿಎಸ್‌ಟಿ ನಂತರ ನೇಕಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೂಡಲೇ ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಹೊನ್ನಪ್ಪ ಬಿರಡಿ, ನೇಕಾರ ಮುಖಂಡರಾದ ಜಿ.ಕೆ. ಒಂಟಗುಡಿ, ಎಂ.ಎ. ಜಮಾದಾರ, ಪ್ರಕಾಶ ರಾವಳ, ಸದಾಶಿವ ಗೊಂದಕರ, ಮಹಾದೇವ ಕೋಪರ್ಡೆ, ಸಿದ್ದಪ್ಪ ದೊಡಮನಿ ಇದ್ದರು.