ಬಸವನಬಾಗೇವಾಡಿ: ತಾಲೂಕಿನ ರಾಮನಹಟ್ಟಿ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಸಂಯೋಜಕ) ವಿಜಯಪುರ ಜಿಲ್ಲಾ ಸಮಿತಿಯಿಂದ ಬಸ್ ಘಟಕದ ವ್ಯವಸ್ಥಾಪಕ ವಿ.ಬಿ. ಚಿತ್ತವಾಡಗಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಡಿ.ಎಸ್.ಎಸ್. ಜಿಲ್ಲಾ ಅಧ್ಯಕ್ಷ ನಾಗೇಶ ತಳವಾರ ಮಾತನಾಡಿ, ರಾಮನಹಟ್ಟಿ ಗ್ರಾಮದಿಂದ ನಿತ್ಯ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಹೂವಿನಹಿಪ್ಪರಗಿ ಹಾಗೂ ಬಸವನಬಾಗೇವಾಡಿ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ, ಗ್ರಾಮಕ್ಕೆ ಹಲವಾರು ದಿನಗಳಿಂದ ಸಮರ್ಪಕ ಬಸ್ ಸೌಲಭ್ಯವಿಲ್ಲದೆ ಸಾರ್ವಜನಿಕರು ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ದೂರಿದರು.
ಬಸವನಾಗೇವಾಡಿಯಿಂದ ದೇವರಹಿಪ್ಪರಗಿ ಮಾರ್ಗವಾಗಿ ಸಂಚರಿಸುವ ಬಸ್‌ಗಳು ವಾಯಾ ರಾಮನಹಟ್ಟಿಗೆ ಹೋಗಲು ಆದೇಶಿಸಬೇಕು. ಕೂಡಲೇ ಗ್ರಾಮಕ್ಕೆ ಹೆಚ್ಚುವರಿ ಬಸ್ ಬಿಡದಿದ್ದರೆ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಬಸ್ ಡಿಪೋಗೆ ಮುತ್ತಿ ಹಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಿಎಸ್‌ಎಸ್ ಜಿಲ್ಲಾ ಉಪಾಧ್ಯಕ್ಷ ಮುದಕಣ್ಣ ದಿಂಡವಾರ, ಪವಡೆಪ್ಪ ಚಲವಾದಿ, ತಾಲೂಕು ಅಧ್ಯಕ್ಷ ಹಣಮಂತ ಹೊಸಮನಿ, ಆಕಾಶ ಮನಗೂಳಿ, ಸಿದ್ರಾಮ ಹಾದಿಮನಿ, ಶಿವು ಮಾದರ, ಚೌಡೆಪ್ಪ ಕಡಕೋಳ, ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷೆ ಕಮಲಾ ಬಿಸನಾಳ, ತಾಲೂಕು ಅಧ್ಯಕ್ಷೆ ರೂಪಾ ಯರನಾಳ, ರಾಮನಹಟ್ಟಿ ಗ್ರಾಮ ಘಟಕದ ಅಧ್ಯಕ್ಷೆ ಮಹಾದೇವಿ ದೊಡಮನಿ, ಲಕ್ಷ್ಮೀಬಾಯಿ ಹೆರಕಲ್‌ಲ್, ಶಂಕ್ರೆವ್ವ ಹೊಸಮನಿ, ಕೀರವ್ವ ಕಾಂಬಳೆ, ಮಹಾದೇವಿ ಹರಿಜನ, ಮಾಂತವ್ವ ದೊಡಮನಿ ಇತರರಿದ್ದರು.