ಕಮತಗಿ : ಪ್ರತಿ ಮಕ್ಕಳಲ್ಲಿ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಅವರ ಪ್ರತಿಭೆ ಅನಾವರಣಕ್ಕೆ ಶಿಕ್ಷಕರ ಮಾರ್ಗದರ್ಶನ, ಪಾಲರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಪಟ್ಟಣ ಪಂಚಾಯತ ಅಧ್ಯಕ್ಷ ರಮೇಶ ಜಮಖಂಡಿ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಡಿಪಿಇಪಿ)ಯಲ್ಲಿ ಹಮ್ಮಿಕೊಂಡಿದ್ದ ಕಮತಗಿ ಮತ್ತು ಮುಗನೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳ ಆಸಕ್ತಿದಾಯಕ ಕ್ಷೇತ್ರದಲ್ಲಿ ಅವರನ್ನು ಮುನ್ನಡೆಯಲು ಶಿಕ್ಷಕರು ಮಾರ್ಗದರ್ಶನ ಮಾಡಬೇಕು. ತಂದೆ-ತಾಯಿಗಳು ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದು ಅವರು, ಡಿಪಿಇಪಿ ಶಾಲೆಯನ್ನು ಸರ್ಕಾರಿ ಪ್ರೌಢಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಲಾಗುವುದು ಅವರು ಭರವಸೆ ನೀಡಿದರು.
ಯುವ ಮುಖಂಡ ನಾಗೇಶ ಮುರಾಳ, ಎಸ್‌ಡಿಎಂಸಿ ಅಧ್ಯಕ್ಷ ಪಿ.ಎಸ್. ಸಿನ್ನೂರ ಅಧ್ಯಕ್ಷತೆ ವಹಿಸಿದ್ದರು. ಸಿಆರ್‌ಪಿ ಪಿ.ಎಸ್. ಚವ್ಹಾಣ, ಮುಖ್ಯಗುರುಗಳಾದ ಎಸ್.ಪಿ. ಮಾದಿನಾಳ, ಜಿ.ಎ. ಗೌಡರ, ಎಂ.ಪಿ. ಕುದರಿ, ಎಂ.ಜಿ. ಗೌಡರ, ಬಿ.ಎಸ್. ನಿಡಗುಂದಿ, ರಾಮು ಕುಣಬೆಂಚಿ, ಎಸ್‌ಡಿಎಂಸಿ ಸದಸ್ಯರಾದ ಎಸ್.ಎಂ. ಯರಗಲ್ಲ, ರವಿ ಕಟ್ಟಿಮನಿ, ಮುರ್ತುಜ ಡಂಗಿ, ಜಿ.ಸಿ. ನಿಡಗುಂದಿ, ಬಸು ಬಡ್ಡೂರ ವೇದಿಕೆಯಲ್ಲಿದ್ದರು.
ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಾದ ಎಸ್.ಪಿ. ಮಾದಿನಾಳ, ಎಸ್.ಬಿ. ಬಿಜಾಪೂರ, ಎಂ.ಎಸ್. ಹನಮಸಾಗರ, ಎಸ್.ಜಿ. ಸಿರಗುಂಪಿ, ಎಸ್.ಪಿ. ಶಾಂತರಾಜ್, ಆಯ್.ಎಚ್. ಕುಂಬಾರ, ಎನ್.ಎಂ. ಕುಪ್ಪಸ್ತ, ವಿಜಯಲಕ್ಷೀತ್ಮ ಕಡಕಲ್ಲ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.