ಕೊಲ್ಕತ್ತ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಹತ್ಯೆ ಘಟನೆಯ ತನಿಖೆ ಬಿರುಸಿನಿಂದ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಅಫ್ಸರ್ ಅಲಿ ಖಾನ್ ಹಾಗೂ ಬಿಪ್ಲಬ್ ಸಿಂಗ್ ಮತ್ತು ಸುಮನ್ ಹಜ್ರಾರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ, ತನಿಖೆಗೆ ಒಳಪಡಿಸಿದರು. ಸದ್ಯ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತಷ್ಟು ಚುರುಕುಗೊಳಿಸುವ ಮೂಲಕ ಮಗಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದೇ ಆದರೂ ನ್ಯಾಯಕ್ಕಾಗಿ ಪ್ರತಿಭಟನೆ ಕೈಗೊಂಡಿರುವ ಡಾಕ್ಟರ್ಗಳು ಎಂದಿನಂತೆ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ: ಭಕ್ತಿಯೇ ಧರ್ಮದ ಮೂಲ, ಸಂಘನಿಕೇತನ ಗಣೇಶೋತ್ಸವಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದ ಚಿತ್ರಾಪುರ ಶ್ರೀ
ಮೃತ ಟ್ರೈನಿ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ ಬೆಳಕಿಗೆ ಬಂದ ಮೊದಲ ದಿನದಿಂದಲೂ ಬೃಹತ್ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರು ತಮ್ಮ ಸ್ನೇಹಿತೆಯ ಸಾವಿಗೆ ನ್ಯಾಯ ಸಿಗುವವರೆಗೂ ಕೆಲಸಕ್ಕೆ ವಾಪಾಸ್ ಆಗುವುದಿಲ್ಲ, ಕರ್ತವ್ಯದತ್ತ ಮುಖ ಮಾಡೋದಿಲ್ಲ ಎಂದು ಪಟ್ಟುಹಿಡಿದು ಪ್ರತಿಭಟನೆ ಕೈಗೊಂಡಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದ ಸಿಎಂ ಮಮತಾ ಬ್ಯಾನರ್ಜಿ, ನಾನು ಸಹ ಮೃತ ಟ್ರೈನಿ ಡಾಕ್ಟರ್ ಸಾವಿಗೆ ನ್ಯಾಯ ಸಿಗಲಿ ಎಂದು ಬಯಸಿದ್ದೇನೆ. ನಿಮ್ಮ ಈ ಹೋರಾಟದಿಂದ ಲಕ್ಷಾಂತರ ರೋಗಿಗಳು ಸಾವು-ಬದುಕಿನ ಮಧ್ಯೆ ಸಿಲುಕಿದ್ದಾರೆ. ಜನರ ಹಿತದೃಷ್ಟಿಯಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲು ಕೂಡ ನಾನು ಸಿದ್ಧ ಎಂದು ಹೇಳಿದ್ದರು. ಸದ್ಯ ಇದೆಲ್ಲದರ ಬೆನ್ನಲ್ಲೇ ನೇರವಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ಕಿರಿಯ ವೈದ್ಯರು, ಕೇಂದ್ರ ಸರ್ಕಾರದ ಸಹಾಯ ಕೋರಿದ್ದಾರೆ.
ಅತ್ಯಾಚಾರ-ಹತ್ಯೆಗೆ ಬಲಿಯಾದ ಟ್ರೈನಿ ವೈದ್ಯೆ ಸಾವಿಗೆ ನ್ಯಾಯ ಒದಗಿಸಿಕೊಡುವಲ್ಲಿ ಪಶ್ಚಿಮ ಬಂಗಾಳ ವಿಫಲವಾಗಿದೆ ಎಂದು ಸಿಟ್ಟಾಗಿರುವ ಪ್ರತಿಭಟನಾ ನಿರತ ವೈದ್ಯರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು, ಈ ಕೇಸ್ನಲ್ಲಿ ನಿಮ್ಮ ಮಧ್ಯಸ್ಥಿಕೆಯ ಅಗತ್ಯವಿದೆ. ದಯವಿಟ್ಟು ಮಧ್ಯೆಪ್ರವೇಶಿಸಿ ಈ ಅವ್ಯವಸ್ಥೆಯನ್ನು ಕೊನೆಗೊಳಿಸಿ ಎಂದು ಮನವಿ ಮಾಡಿರುವುದು ತಿಳಿದುಬಂದಿದೆ. ನಾಲ್ಕು ಪುಟಗಳ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾರಿಗೆ ಈ ವಿಷಯವನ್ನು ಉಲ್ಲೇಖಿಸಿ, ಬರೆದಿದ್ದಾರೆ,(ಏಜೆನ್ಸೀಸ್).
‘ರನ್ ಮಷಿನ್’ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು! ಈ 3 ಕಾರಣಗಳ ಹಿಂದೆ ಕ್ಯಾಪ್ಟನ್ ಹಾರ್ದಿಕ್ ಓಟ