25.9 C
Bengaluru
Wednesday, January 22, 2020

ಗೋಕಾಕ: ಪ್ರತಿಭಟನಾಕಾರರ ಜಟಾಪಟಿ

Latest News

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಕರೋನಾ ವೈರಸ್​ ಪತ್ತೆ ಮಾಡಲು ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಕೇಂದ್ರಗಳ ಸ್ಥಾಪನೆ

ತಿರುವನಂತಪುರ: ಕರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಲಹೆ ಮೇರೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ವೈರಸ್​ ಪತ್ತೆ ಮಾಡುವ ಸ್ಕ್ರೀನಿಂಗ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ...

ಗೋಕಾಕ: ಪಾಲ್ಸ್ ದನದ ಓಣಿ ರಹವಾಸಿಗಳಿಗೆ ಸರ್ಕಾರದ ಸೌಭಾಗ್ಯ ಯೋಜನೆಯಡಿ ಗೃಹಪಯೋಗಿ ವಿದ್ಯುತ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಸೋಮವಾರ ಬಿಜೆಪಿ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜರುಗಿತು.

ಪ್ರತಿಭಟನೆ ಮೆರವಣಿಗೆ ಮೂಲಕ ಗೋಕಾಕ ತಹಸೀಲ್ದಾರ್ ಕಚೇರಿಗೆ ಬರುವಾಗ, ಅನರ್ಹಗೊಳಿಸಲಾದ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿಗರು ಅಂಬಿರಾವ್ ಪಾಟೀಲಗೆ ಜಯವಾಗಲಿ, ರಮೇಶ ಜಾರಕಿಹೊಳಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಅಶೋಕ ಪೂಜಾರಿ ಗೋಬ್ಯಾಕ್ ಎಂದು ಪ್ರತಿಭಟನಾಕಾರರ ವಿರುದ್ಧವೇ ಪ್ರತಿಭಟನೆ ನಡೆಸಿದರು. ತಹಸೀಲ್ದಾರ್ ಕಚೇರಿಯಲ್ಲೇ ಎರಡೂ ಗುಂಪುಗಳು ಘೋಷಣೆ ಕೂಗಲು ಪ್ರಾರಂಭಿಸಿದಾಗ ಪರಿಸ್ಥಿತಿ ಕೈಮೀರುವ ಹಂತ ತಲುಪಿತು. ಗೋಕಾಕ ಡಿಎಸ್‌ಪಿ ಪ್ರಭು ಡಿ.ಟಿ. ಪ್ರತಿಭಟನಾಕಾರರನ್ನು ಚದುರಿಸಿದರು.

ಅಶೋಕ ಪೂಜಾರಿ ಮಾತನಾಡಿ, ನಾವು ಪೊಲೀಸರ ಅನುಮತಿ ಪಡೆದೇ ಪ್ರತಿಭಟನೆ ನಡೆಸಿದ್ದೇವೆ. ಅದರಲ್ಲಿ ನಮ್ಮದೇನೂ ಸ್ವಾರ್ಥವಿಲ್ಲ. ಹೋರಾಟವನ್ನೇ ಹತ್ತಿಕ್ಕುವ ಧೋರಣೆ ನೋಡಿದರೆ ಇದೇನು ಗೋಕಾಕ ರಿಪಬ್ಲಿಕ್ಕಾ ಎಂದು ಖಾರವಾಗಿ ಪ್ರಶ್ನಿಸಿದರು.

1884ಕ್ಕಿಂತಲೂ ಪೂರ್ವದಿಂದಲೇ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿ ದನ ಸಾಕಣೆ ಮಾಡಿ ಉಪಜೀವನ ಸಾಗಿಸುತ್ತಿದ್ದ ಕುಟುಂಬಗಳು ಗೋಕಾಕ ಪಾಲ್ಸ್ ಸರಹದ್ದಿನ ಮೂಲ ನಿವಾಸಿಗಳಾಗಿದ್ದು, ಮನೆಗಳಿಗೆ ಈವರೆಗೂ ಗೃಹ ಬಳಕೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಿಲ್ಲ ಎಂದು ದೂರಿದರು.

500 ಕುಟುಂಬಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಲು ಆಗ್ರಹಿಸಿ ನಡೆದ ಪ್ರತಿಭಟನೆ ಮತ್ತು ಮನವಿಗೆ ಪೂರಕವಾಗಿ ಸರ್ಕಾರ 2019 ಜನವರಿಯಲ್ಲಿಯೇ ಈ ಕುಟುಂಬಗಳಿಗೆ ಗೃಹಪಯೋಗಿ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಲು ಅಕೃತ ಮಂಜೂರಾತಿ ನೀಡಿದೆ.

ಗುತ್ತಿಗೆದಾರರಿಗೆ ಗುತ್ತಿಗೆಯನ್ನು ನೀಡಲಾಗಿದೆ. ಆದರೆ ಗೋಕಾಕ ಮಿಲ್ ಆಡಳಿತ ಮಂಡಳಿ ಮತ್ತು ಕೊಣ್ಣೂರ ಪುರಸಭೆ ಬಂಡವಾಳಶಾಹಿ ಹಿತ ಕಾಯುವ ಧೋರಣೆಯಿಂದಾಗಿ ಈವರೆಗೂ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡುವ ಕೆಲಸ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಂಗಪ್ಪ ನಾಯಿಕ, ದಶರಥ ಪೂಜೇರಿ, ವಿಠ್ಠಲ ಬೂರನ್ನವರ, ಮಂಜು ಮೇರನ್ನವರ, ರಾಜು ಬಸವರಾಜ ನೀಲನ್ನವರ, ಅನ್ನಪೂರ್ಣಾ ಬೈರತಿ, ರಾಜು ಯರಗಟ್ಟಿ, ಮುತ್ತೆಪ್ಪ ರೂಪಿ, ಜಪಾರಸಾಬ ಭಾಗಿ, ಸತ್ಯಪ್ಪ ಪೂಜೇರಿ, ಹನುಮಂತ ಪಾತ್ರೋಟ, ಲಕ್ಷ್ಮವ್ವ ಬಾದನವರ, ಯಲ್ಲವ್ವ ಹೆಳವ್ವಗೋಳ, ವಿಜಯ ಕರಗುಪ್ಪಿ, ಸಂತೋಷ ಮಾಳಿಗೇರ, ಬಾಳಪ್ಪ ಕರಗುಪ್ಪಿ, ಜ್ಯೋತಿ ಮಾದರ, ರಾಜು ಜಾಧವ, ಸುನೀಲ ಮುರ್ಕಿಬಾವಿ, ದಸ್ತಗೀರ್ ಪೈಲವಾನ್, ಶಾಮಾನಂದ ಪೂಜೇರಿ,  ವಿರೂಪಾಕ್ಷಿ ಯಲಿಗಾರ, ಚನ್ನಬಸು ರುದ್ರಾಪುರ, ಮಹೇಶ ಮಠಪತಿ, ಆದರ್ಶ ಪೂಜಾರಿ, ಸತೀಶ ಪೂಜಾರಿ, ಹನುಮಂತ ಕಾಳಮ್ಮಗುಡಿ, ಶ್ರೀಶೈಲ ಪೂಜಾರಿ, ನಿಂಗಪ್ಪ ಅಮ್ಮಿನಬಾವಿ, ಯಲ್ಲಪ್ಪ ಹುಕ್ಕೇರಿ, ಪ್ರೇಮಾ ಚಿಕ್ಕೋಡಿ, ಕುಮಾರ ಬೆಳವಿ ಇತರರು ಪಾಲ್ಗೊಂಡಿದ್ದರು.

ತಹಸೀಲ್ದಾರ್ ಕಾರ್ಯಾಲಯದ ಎದುರು ಧರಣಿ ಮಾಡಿದ್ದೇವೆ. ಮನವಿಗೆ ಪೂರಕವಾದ ಪ್ರತಿಕ್ರಿಯೆ ದೊರೆಯದಿದ್ದರೆ ಮುಂದಿನ ಹೋರಾಟ ಜಿಲ್ಲಾಕಾರಿ ಕಚೇರಿ, ನಂತರ ವಿಧಾನಸೌಧಕ್ಕೆ, ನ್ಯಾಯ ಸಿಗದಿದ್ದಲ್ಲಿ ಪ್ರಧಾನ ಮಂತ್ರಿಗಳವರೆಗೂ ನಿಯೋಗ ಕೊಂಡೊಯ್ಯಲಾಗುವುದು.
|ಅಶೋಕ ಪೂಜಾರಿ ಬಿಜೆಪಿ ಮುಖಂಡ

ಸಾರ್ವಜನಿಕರಿಗೆ ಪ್ರತಿಭಟನೆ ನಡೆಸುವ ಹಕ್ಕು ಇಲ್ಲವೇ?

ಗೋಕಾಕದಲ್ಲಿ ಜನರಿಗೆ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟಿಸುವ ಹಕ್ಕು ಕೂಡ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಿದ್ದೇವೆ ಎಂದು ಹೇಳಿದರೂ ಜಾರಕಿಹೊಳಿ ಬೆಂಬಲಿಗರು ನಾವು ಅನುಮತಿ ನೀಡುವುದಿಲ್ಲ ಎನ್ನುತ್ತಾರೆ ಎಂದು ಪ್ರತಿಭಟನಾಕಾರರು ದೂರಿದರು. ಗೋಕಾಕ ಜನರಿಗೆ ರಮೇಶ ಜಾರಕಿಹೊಳಿ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಕೊಡಿಸುವುದಾಗಿ ಸತೀಶ ಜಾರಕಿಹೊಳಿ ಹೇಳುತ್ತಾರೆ. ಆದರೆ, ರಮೇಶ ಬೆಂಬಲಿಗರು ಪೊಲೀಸರೊಂದಿಗೆ ವಾಗ್ವಾದ ಮಾಡುವಾಗ, ಗೋಕಾಕ ಾಲ್ಸ್ ಪರಿಸರದಲ್ಲಿ ಬಿಜೆಪಿ ಮುಖಂಡ ಅಶೋಕ ಪೂಜಾರಿ ಕಾಲಿಡಬಾರದು ಎನ್ನುವುದನ್ನು ನೋಡಿದರೆ ಪ್ರತಿಭಟಿಸುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದರು.

ಪ್ರತಿಭಟನೆಗೂ ಬಿಜೆಪಿಗೂ ಸಂಬಂಧವಿಲ್ಲ

ಗೋಕಾಕ: ಗೋಕಾಕ ಪಾಲ್ಸ್ ದನದ ಓಣಿ ವಿದ್ಯುತ್ ವಿವಾದಕ್ಕೆ ಸಂಬಂಸಿ ಪ್ರತಿಭಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಶಶಿಧರ ದೇಮಶೆಟ್ಟಿ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಿಂದ ಪ್ರತಿಭಟನೆ ಜರುಗಿಲ್ಲ. ಅಶೋಕ ಪೂಜಾರಿ ವೈಯಕ್ತಿಕವಾಗಿ ಹೋರಾಟ ಮಾಡುತ್ತಿರಬಹುದು. ಗೋಕಾಕ ಪಾಲ್ಸ್ ದನದ ಓಣಿ ನೊಂದ ನಿವಾಸಿಗಳಿಗೆ ನ್ಯಾಯ ಸಿಗಲಿ. ಆದರೆ ಪ್ರತಿಭಟನೆಯಲ್ಲಿ ಬಿಜೆಪಿ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...