More

    ಭಾರತ್​ ಬಂದ್​: ಪಶ್ಚಿಮ ಬಂಗಾಳದಲ್ಲಿ ಬಸ್​ಗಳು ಧ್ವಂಸ, ಪೊಲೀಸ್​ ವಾಹನಗಳಿಗೆ ಬೆಂಕಿ; ತೆಲಂಗಾಣದಲ್ಲಿ ಬ್ಯಾಂಕಿಂಗ್​ ಸೇವೆಯಲ್ಲಿ ವ್ಯತ್ಯಯ

    ನವದೆಹಲಿ: ಭಾರತ್​ ಬಂದ್​ ಹೆಚ್ಚಾಗಿ ಪರಿಣಾಮ ಬೀರಿದ್ದು ಪಶ್ಚಿಮ ಬಂಗಾಳದಲ್ಲಿ ಎನ್ನಲಾಗಿದೆ. ಯಾವುದೇ ಪ್ರತಿಭಟನೆ, ಹೋರಾಟ, ಬಂದ್​ ಇದ್ದರೂ ಅದು ಪಶ್ಚಿಮ ಬಂಗಾಳದಲ್ಲಿ ತುಸು ಮಿತಿಮೀರುತ್ತದೆ ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದ್ದು ಈ ಭಾರತ್​ ಬಂದ್​ ಕೂಡ ಅದನ್ನು ಸಾಕ್ಷೀಕರಿಸಿದೆ.

    ಉತ್ತರ 24 ಪರಗಣದ ಹೃದಯಪುರ ರೈಲ್ವೆ ಸ್ಟೇಶನ್​ ಬಳಿ ಹಳಿಗಳ ಮೇಲೆ ಇಡಲಾದ 4 ಕಚ್ಚಾಬಾಂಬ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಹೌರಾಹ್​ನಲ್ಲಿ ರೈಲ್ವೆ ಹಳಿಗಳನ್ನು ಪ್ರತಿಭಟನಾಕಾರರು ಬ್ಲಾಕ್ ಮಾಡಿದ್ದಾರೆ. ಕೂಚ್​ ಬೆಹಾರ್​​ದಲ್ಲಿ ಬಸ್​ಗಳನ್ನು ಒಡೆದು ಧ್ವಂಸ ಮಾಡಿದ್ದಾರೆ.

    ಅಷ್ಟೇ ಅಲ್ಲದೆ ಮಾಲ್ಡಾದಲ್ಲಿ ಪ್ರತಿಭಟನಾಕಾರರು ಪೊಲೀಸ್​ ವಾಹನಗಳಿಗೇ ಬೆಂಕಿ ಹಚ್ಚಿದ್ದಾರೆ.

    ಮಹಾರಾಷ್ಟ್ರ ರಾಜ್ಯ ಸರ್ಕಾರದ ಬೆಂಬಲ
    ಇನ್ನು ಮಹಾರಾಷ್ಟ್ರದಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್​ ಬಂದ್​ಗೆ ಬೆಂಬಲ ನೀಡುವುದಾಗಿ ತಿಳಿಸಿದೆ. ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿಯಾಗಿ ವರ್ತಿಸುತ್ತಿದೆ. ಹಾಗಾಗಿ ನಾವೂ ಭಾರತ್​ ಬಂದ್​ಗೆ ಕೈಜೋಡಿಸುತ್ತಿದ್ದೇವೆ ಎಂದು ಮೈತ್ರಿ ಸರ್ಕಾರದ ಪಿಡಬ್ಲ್ಯೂಡಿ ಸಚಿವ ಅಶೋಕ್​ ಚವ್ಹಾಣ್​ ಹೇಳಿದ್ದಾರೆ.
    ಪಂಜಾಬ್​ನಲ್ಲೂ ಕೂಡ ಪ್ರತಿಭಟನಾಕಾರರು ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಇನ್ನು ತಮಿಳುನಾಡಿನದಲ್ಲಿ ಮೌಂಟ್​ ರಸ್ತೆಯಲ್ಲಿ ಕಾರ್ಮಿಕ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.

    ಬ್ಯಾಂಕಿಂಗ್​ ಸೇವೆ ಮೇಲೆ ಪರಿಣಾಮ
    ತೆಲಂಗಾಣದಲ್ಲಿ ಬ್ಯಾಂಕಿಂಗ್​ ಸೇವೆ ಮೇಲೆ ಭಾರತ್​ ಬಂದ್​ ಪರಿಣಾಮ ಬೀರಿದೆ. ಅಲ್ಲದೆ ಬಹುತೇಕ ಅಂಗಡಿಗಳು ಮುಚ್ಚಲ್ಪಟ್ಟಿದ್ದು, ಸಾರಿಗೆ ವ್ಯವಸ್ಥೆ ಸ್ಥಗಿತವಾಗಿದೆ. ತೆಲಂಗಾಣದಲ್ಲಿ ಸುಮಾರು 3 ಲಕ್ಷ ವಿವಿಧ ಸಂಘಟನೆಗಳ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಬ್ಯಾಂಕ್ ಸೇರಿ ಬಹುತೇಕ ಎಲ್ಲ ಸಾರ್ವಜನಿಕ ವಲಯದ ಸಂಸ್ಥೆಗಳ ಸಿಬ್ಬಂದಿಯೂ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಬ್ಯಾಂಕಿಂಗ್​ ಸೇವೆಯಲ್ಲಿ ವ್ಯತ್ಯಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts