ಪ್ರತಿಭಟನಾ ನಿರತ ಕಬ್ಬುಬೆಳೆಗಾರರ ಜತೆ ಸಚಿವ ಜಾರ್ಜ್​ ಮಾತುಕತೆ: ಸಮಸ್ಯೆ ಪರಿಹಾರದ ಭರವಸೆ

ಬೆಳಗಾವಿ: ಸುವರ್ಣ ಸೌಧದ ಸಮೀಪ ಕೊಂಡಸಕೊಪ್ಪದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನಾ ಸ್ಥಳಕ್ಕೆ ಸಕ್ಕರೆ ಇಲಾಖೆ ಸಚಿವ ಕೆ.ಜೆ.ಜಾರ್ಜ್​ ಭೇಟಿ ನೀಡಿ ಮಾತುಕತೆ ನಡೆಸಿದರು.

ನಂತರ ಮಾತನಾಡಿ, ರೈತರೊಂದಿಗೆ ನಡೆದ ಒಪ್ಪಂದದ ಪ್ರಕಾರ ದರ ನೀಡುವಂತೆ ಮುಖ್ಯಮಂತ್ರಿ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ 2 ಸಾವಿರ ಕೋಟಿ ರೂಪಾಯಿ ನೀಡಿದ್ದಾರೆ. ಕಾರ್ಖಾನೆಗಳ ಜತೆ ಮಾತುಕತೆ ನಡೆಸುತ್ತಿದ್ದ ಮಾಲೀಕರು ಜೂನ್​ವರೆಗೆ ಸಮಯ ಕೇಳಿದ್ದಾರೆ ಎಂದು ಹೇಳಿದರು.

ಈಗಾಗಲೇ ಕಬ್ಬಿನ ಇಳುವರಿ ಖುದ್ದಾಗಿ ಪರಿಶೀಲನೆ ನಡೆಸಲು ಸಮಿತಿ ರಚನೆ ಮಾಡಿದೆ. ಎಫ್​ಆರ್​ಪಿ ದರ ಕಡಿಮೆಯಾಗಿದ್ದರೆ ಅದನ್ನು ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು. ಸಕ್ಕರೆ ರಫ್ತು ಮಾಡಲು ಸಬ್ಸಿಡಿ ನೀಡಲು ವಿನಂತಿಸಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ 17 ಕೋಟಿ ರೂ. ಬಾಕಿ ಉಳಿದಿದೆ. ಅದನ್ನು ತಕ್ಷಣ ವಸೂಲಿಗೆ ಕ್ರಮ ಜರುಗಿಸಲಾಗಿದೆ. ಹಾಗಾಗಿ ಅಹೋರಾತ್ರಿ ಧರಣಿ ಕೈಬಿಡುವಂತೆ ರೈತರಿಗೆ ಸಚಿವರು ಮನವಿ ಮಾತನಾಡಿದರು.

ಕಬ್ಬು ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ